alex Certify ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…!

ಥಾಯ್ಲೆಂಡ್  ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಯುವಕನ ಮರ್ಮಾಂಗ ಕ್ಕೆ ಹಾವು ಕಚ್ಚಿ ಒದ್ದಾಡಿದ್ದಾನೆ. 18 ವರ್ಷದ ಯುವಕ ಎಂದಿನಂತೆ ಅಂದೂ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಕುಳಿತುಕೊಳ್ತಿದ್ದಂತೆ ಮರ್ಮಾಂಗಕ್ಕೆ ನೋವಾಗಿದೆ. ನೋಡಿದ್ರೆ ಶೌಚಾಲಯದಲ್ಲಿದ್ದ ಹಾವು ಕಚ್ಚಿದೆ.

ಒಂದೇ ಸಮನೆ ರಕ್ತ ಬರ್ತಿರುವುದನ್ನು ನೋಡಿದ ಯುವಕ ಕಂಗಾಲಾಗಿದ್ದಾನೆ. ತಕ್ಷಣ ಅಮ್ಮನಿಗೆ ವಿಷ್ಯ ತಿಳಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಕ್ತಸ್ರಾವ ನಿಲ್ಲಿಸಲಾಗಿದ್ದು, ಔಷಧಿ ನೀಡಲಾಗಿದೆ. ಯಾವುದೇ ರಿಯಾಕ್ಷನ್ ಆಗದಂತೆ ನೋಡಿಕೊಂಡಿದ್ದೇವೆಂದು ವೈದ್ಯರು ಹೇಳಿದ್ದಾರೆ.

ಹಾವು ನಾಲ್ಕು ಇಂಚು ಉದ್ದವಿತ್ತಂತೆ. ಹಾವು ತಜ್ಞರನ್ನು ಕರೆಸಿ ಹಾವನ್ನು ಕಾಡಿಗೆ ಬಿಡಲಾಗಿದೆಯಂತೆ. ಹಾವು ಹೇಗೆ ಬಂತು ನಮ್ಮ ಮನೆಗೆ ಎಂಬುದು ಗೊತ್ತಾಗ್ತಿಲ್ಲ. ಹಾವು ವಿಷಕಾರಿಯಾಗಿರಲಿಲ್ಲ. ಹಾಗಾಗಿ ಮಗ ಉಳಿದುಕೊಂಡಿದ್ದಾನೆಂದು ಆತನ ತಾಯಿ ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...