alex Certify ವೈರಲ್ ಆಯ್ತು ಮದುವಣಗಿತ್ತಿಯ ಕದನದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಮದುವಣಗಿತ್ತಿಯ ಕದನದ ವಿಡಿಯೋ

ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿರುವ ಮಹಿಳೆಯೊಬ್ಬಳು ರಾತ್ರೋ ರಾತ್ರಿ ರಸ್ತೆಯಲ್ಲಿ ಜಗಳ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಸೌತ್ ವೇಲ್ಸ್ ನ ಸ್ವ್ಯಾನ್ ಸೀ ಎಂಬಲ್ಲಿರುವ ರಗ್ಬಿ ಕ್ಲಬ್ ನಲ್ಲಿ ಜೋ ಹಾಗೂ ಡೇವಿಡ್ ಮದುವೆ ಕಾರ್ಯಕ್ರಮ ಆಯೋಜನೆ ಆಗಿತ್ತು. ಮದುವೆ ಮುಗಿಸಿ, ಅದೇ ವಸ್ತ್ರದಲ್ಲಿ ವಾಯುವಿಹಾರಕ್ಕೆ ಹೊರಟಾಗ, ಕ್ಲಬ್ ಹೊರಗೆ ಅಪರಿಚಿತರ ಗುಂಪೊಂದು ಯಾವುದೋ ವಿಚಾರಕ್ಕೆ ವಾಗ್ವಾದ ಮಾಡುತ್ತಿತ್ತು.

ತಮಗೇಕೆ ಎಂದು ನಡೆದುಕೊಂಡು ಹೋಗುತ್ತಿದ್ದ ಜೋ, ಏನನ್ನಿಸಿತೋ ಏನೋ. ಇಂದು ನಮ್ಮ ಮದುವೆ, ನೀವೇಕೆ ಜಗಳ ಮಾಡುತ್ತಿದ್ದೀರಿ ? ನೀವೆಲ್ಲ ಯಾರೆಂದು ಗೊತ್ತಿಲ್ಲ, ಜಗಳ ಬೇಡ ಎಂದು ಎಂದು ಬುದ್ಧಿವಾದ ಹೇಳಲು ಹೋಗಿದ್ದಾಳೆ. ಇಲ್ಲಿಂದ ಶುರುವಾದ ಗಲಾಟೆ ಅಪರಿಚಿತರ ಗುಂಪು ಮತ್ತು ಜೋ ನಡುವೆ ಹೊಡೆದಾಟಕ್ಕೆ ಕಾರಣವಾಯಿತು. ಮದುಮಗಳಾಗಿದ್ದ ಜೋ, ಅಕ್ಷರಶಃ ಬಾಕ್ಸಿಂಗ್ ರಿಂಗ್ ನಲ್ಲಿನ‌ ಬಾಕ್ಸರ್ ರೀತಿ ಹೊಡೆದಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಕ್ಲಬ್ ಸ್ಪಷ್ಟನೆ ನೀಡಿದ್ದು, ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.

https://www.facebook.com/cumonthelan/posts/3614364631907988

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...