alex Certify ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…!

ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಬಿಳಿ ಶೀಟ್ ಹೊದ್ದು ಮಲಗಿ ದಾರಿಹೋಕರಲ್ಲಿ ಗಾಬರಿಹುಟ್ಟಿಸಿದ ಪ್ರಸಂಗ ಗಾಜಿಯಾಬಾದ್ ನಲ್ಲಿ‌ನಡೆದಿದೆ.

ರಸ್ತೆ ಬದಿಯಲ್ಲಿ‌ ಮೃತದೇಹ ಬಿದ್ದಿದೆ ಎಂದು ಜನರು ಆತಂಕಿತರಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ರಸ್ತೆ ಸಂಚಾರವೇ ಬಂದ್ ಆಗಿಬಿಟ್ಟಿತ್ತು. ಕೊರೊನಾ ತೀವ್ರವಾಗಿರುವದರಿಂದ ಜನ ಬೆಚ್ಚಿಬಿದ್ದಿದ್ದರು. ಆದರೆ ಪೊಲೀಸರು ಬಂದು ನೋಡಿದಾಗ ವ್ಯಕ್ತಿಯೊಬ್ಬ ಗಾಢನಿದ್ರೆಯಲ್ಲಿ ಇರುವುದು ಕಂಡುಬಂತು.

ಬಿಳಿ ಶೀಟ್ ‌ಅನ್ನು ಅಡಿಯಿಂದ ಮುಡಿವರೆಗೆ ಹೊದ್ದು ಮಿಸುಕಾಡದೇ ಮಲಗಿದ್ದಾತನನ್ನು ಪೊಲೀಸರು ಎಬ್ಬಿಸಿದಾಗ ಜನ ನಿರುಮ್ಮಳರಾದರು. ಆತ ತನಗೇನು ತಿಳಿಯದವನಂತೆ ಎದ್ದು ಹೊರಟಾಗ ಅಲ್ಲಿದ್ದ ಜನ ನಿಟ್ಟುಸಿರು ಬಿಟ್ಟು ನಕ್ಕರು. ಜನ ಆತಂಕಿತರಾಗಿರುವ ಮತ್ತು ಪೊಲೀಸರು ಬಂದು ಆತನನ್ನು ಎಬ್ಬಿಸುವ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ವಿಡಿಯೋ ‌ನೋಡಿ ಬಿದ್ದುಬಿದ್ದು ನಗೆಯಾಡಿದ್ದಾರೆ.

https://twitter.com/saurabh3vedi/status/1303382680373874695?ref_src=twsrc%5Etfw%7Ctwcamp%5Etweetembed%7Ctwterm%5E1303382680373874695%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwatch-body-in-white-sheet-on-ghaziabad-roadside-turns-out-to-be-man-in-slumber-hilarious-video-goes-viral%2F650210

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...