ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯ ಬಹಿರಂಗವಾಗಿದೆ. ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ 100 ಮಂದಿ ಜೊತೆ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗಿದೆ.
ಇಷ್ಟೇ ಅಲ್ಲ 10 ಸಾವಿರ ಫೋನ್ ಕರೆಗಳನ್ನು ಪರಿಶೀಲಿಸಲಾಗಿದೆ. ಸಿಡಿಆರ್ ಮೂಲಕ ಕರೆ ಮಾಹಿತಿಯನ್ನು ಪತ್ತೆ ಮಾಡಲಾಗಿದೆ. ಅಧಿಕಾರಿಗಳು ಇಬ್ಬರು ನಟಿಯರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆಂದು ಮೂಲಗಳು ಹೇಳಿವೆ. ಪ್ರಭಾವಿ ವ್ಯಕ್ತಿಗಳ ಆಪ್ತರಿಗೆ ಇವರು ಕರೆ ಮಾಡಿದ್ದರು ಎನ್ನಲಾಗಿದೆ.
ಇದೇ ವೇಳೆ ನಟಿ ಸಂಜನಾ ಡ್ರಾಮ ಮತ್ತೆ ಮುಂದುವರೆದಿದೆ. ಪೊಲೀಸ್ ಎದುರು ಸಂಜನಾ ರಂಪ ಮಾಡಿದ್ದಾಳೆ ಎನ್ನಲಾಗಿದೆ. ಯಾರದ್ದೋ ಫೋಟೋ ತೋರಿಸಿ ಪ್ರಶ್ನೆ ಕೇಳಿದ್ರೆ ಉತ್ತರ ನೀಡಲು ಸಾಧ್ಯವಿಲ್ಲ. ಕೇಳಿದ್ದೇ ಪ್ರಶ್ನೆ ಕೇಳಬೇಡಿ ಎಂದು ಸಂಜನಾ ಕಿಡಿಕಾರಿದ್ದಾರಂತೆ.