ನುಗ್ಗೆ ಗಿಡದ ಕಾಯಿ ಹಾಗೂ ಸೊಪ್ಪು ಎರಡೂ ಔಷಧೀಯ ಗುಣ ಹೊಂದಿದ್ದು, ಹಲವು ಪೋಷಕಾಂಶಗಳಿಂದ ಕೂಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನುಗ್ಗೆ ಸೊಪ್ಪನ್ನು ಉಪಯೋಗಿಸಿ ಪತ್ರೊಡೆ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು : ಕುಚಲಕ್ಕಿ – 2 ಕಪ್, ನುಗ್ಗೆ ಸೊಪ್ಪು – 1 1/2 ಕಪ್, ಒಣಮೆಣಸು – 4, ಅರಿಶಿನ ಚಿಟಿಕೆಯಷ್ಟು, ಕೊತ್ತಂಬರಿ ಕಾಳು – 1/2 ಚಮಚ, ಜೀರಿಗೆ – 1/2 ಚಮಚ, ಹುಣಸೆಹಣ್ಣು ಗೋಲಿ ಗಾತ್ರದಷ್ಟು, ಕಾಯಿ ತುರಿ 1/2 ಕಪ್, ಬೆಲ್ಲದ ಪುಡಿ- 3/4 ಕಪ್, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಕುಚಲಕ್ಕಿಯನ್ನು 6-8 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೀರು ಬಸಿದು ಕಾಯಿತುರಿ, ಕೆಂಪು ಮೆಣಸಿನಕಾಯಿ, ಅರಿಶಿನ, ಕೊತ್ತಂಬರಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ಗಟ್ಟಿಯಾಗಿ ರುಬ್ಬಿ ತೆಗೆಯಿರಿ.
ನಂತರ ಶುಚಿ ಮಾಡಿದ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ, ಉಂಡೆ ಮಾಡಿ ಅಥವಾ ಬಾಳೆ ಎಲೆಗೆ ಹಿಟ್ಟು ಹಾಕಿ ಮಡಚಿ ಇಟ್ಟು ಹಬೆಯಲ್ಲಿ ಬೇಯಿಸಿ. ಇದನ್ನು ಬಿಸಿ ಇರುವಾಗಲೇ ತುಪ್ಪ, ಸಾಂಬಾರ್ ಜೊತೆ ಸವಿಯಬಹುದು.