alex Certify ಕೊರೊನಾ ಮಧ್ಯೆಯೂ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ ಉದ್ಯೋಗವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ ಉದ್ಯೋಗವಕಾಶ

ಗ್ರಾಮೋದ್ಯೋಗ ವಿಕಾಸ್ ಯೋಜನೆ ಅಡಿ ಅಗರಬತ್ತಿ ಉತ್ಪಾದನೆಯ ಕುಶಲಕರ್ಮಿಗಳಿಗೆ ಅನುಕೂಲವಾಗಲೆಂದು ಮೋದಿ ಸರ್ಕಾರ ಕಾರ್ಯಕ್ರಮವೊಂದಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕು ಈಗ ಒಂದು ತಿಂಗಳಾಗಿದ್ದು, ಅದರ ಗಾತ್ರವನ್ನು ಸರ್ಕಾರ ಹೆಚ್ಚಿಸಿದೆ. ಕಾರ್ಯಕ್ರಮದ ಹೊಸ ಮಾರ್ಗಸೂಚಿಗಳ ಪ್ರಕಾರ, ಇದರ ಒಟ್ಟು ಗಾತ್ರವನ್ನು 2.66 ಕೋಟಿಯಿಂದ 55 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು 6,500 ಜನರಿಗೆ ನೆರವಾಗಲಿದೆ.

ಕೊರೊನಾ ಮಧ್ಯೆಯೂ ಧೂಪ ಮತ್ತು ಅಗರಬತ್ತಿ ವ್ಯಾಪಾರ ದೇಶೀಯ ಮಾರುಕಟ್ಟೆಯಲ್ಲಿ ಶೇಕಡಾ 15 ರಷ್ಟು ಬೆಳೆಯುತ್ತಿದೆ. ಅಗರಬತ್ತಿ ಮತ್ತು ಧೂಪದ ದೇಶೀಯ ಮಾರುಕಟ್ಟೆಯ ಮೌಲ್ಯ 15,000 ಕೋಟಿ ರೂಪಾಯಿ. ದೇಶದಲ್ಲಿ ಪ್ರಸ್ತುತ ಇದ್ರ ಬೇಡಿಕೆ ಮೂರು ಸಾವಿರ ಟನ್. ಸರಬರಾಜು ಅರ್ಧದಷ್ಟಿದೆ. ಉಳಿದ ಸರಕುಗಳು ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳಿಂದ ಬರುತ್ತಿವೆ. ಸ್ವಾವಲಂಭಿ ಭಾರತದಡಿ ಸರ್ಕಾರ ಇದಕ್ಕೆ ನೆರವಾಗ್ತಿದೆ. ಉದ್ಯೋಗ ಶುರು ಮಾಡಲು ಬಯಸುವವರು ಅಗರಬತ್ತಿ ಉತ್ಪಾದನೆಗೆ ಕೈ ಹಾಕಬಹುದು.

ಮನೆಯಲ್ಲಿಯೇ ಈ ಉದ್ಯೋಗ ಶುರು ಮಾಡಬಹುದು. ಮನೆಯಲ್ಲಿ 13000 ಕ್ಕೆ ಈ ಉದ್ಯೋಗ ಶುರು ಮಾಡಬಹುದು. ಆದ್ರೆ ಹೆಚ್ಚಿನ ಲಾಭ ನಿರೀಕ್ಷೆ ಕಷ್ಟ. ಬಂಡವಾಳ ಹಾಕಿ ಉದ್ಯೋಗ ಶುರು ಮಾಡುವವರು ಯಂತ್ರಗಳ ಮೂಲಕ ಅಗರಬತ್ತಿ ಉತ್ಪಾದನೆ ಶುರು ಮಾಡಬಹುದು. ಯಂತ್ರಕ್ಕೆ 90 ರಿಂದ 1.75 ಲಕ್ಷದವರೆಗಿದೆ. ಸ್ವಯಂಚಾಲಿತ ಯಂತ್ರವು ಒಂದು ದಿನದಲ್ಲಿ 100 ಕೆಜಿ ಅಗರಬತ್ತಿ ಮಾಡುತ್ತದೆ. ಅಗರಬತ್ತಿ ಸುವಾಸನೆ, ಆಕರ್ಷಕ ಪ್ಯಾಕಿಂಗ್ ಮೂಲಕ ನೀವು ಹೆಚ್ಚು ಲಾಭ ಗಳಿಸಬಹುದು. ಸರ್ಕಾರ ಈ ಉದ್ಯೋಗಕ್ಕೆ ಸಬ್ಸಿಡಿ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...