ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ದಿನಕ್ಕೊಂದು ಸಂಶೋಧನೆಗಳು ಬರುತ್ತಿವೆ. ಆದರೆ ಯಾವುದು ಸತ್ಯ, ಯಾವುದು ಅಸತ್ಯ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆಯಿಲ್ಲ.
ಹೌದು, ಇಷ್ಟು ದಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಆ್ಯಂಟಿ ಬಾಡೀಸ್ ದೇಹದಲ್ಲಿದ್ದರೆ ಕೊರೊನಾ ಬರುವುದಿಲ್ಲ ಎನ್ನುವ ನಂಬಿಕೆಯಲ್ಲಿ ಅನೇಕರಿದ್ದರು. ಆದರೀಗ ದೇಹದಲ್ಲಿ ಆ್ಯಂಟಿಬಾಡೀಸ್ ಇದ್ದ ಕೂಡಲೇ ಕೊರೊನಾ ತಪ್ಪಿಸಿಕೊಳ್ಳಬಹುದು ಎನ್ನುವುದು ಸುಳ್ಳು ಎಂದು ವಿಜ್ಞಾನಿಗಳ ತಂಡವೊಂದು ವಾದಿಸಿದೆ.
ಹಾಗೇ ನೋಡಿದರೆ ಯಾವುದೇ ವ್ಯಕ್ತಿಯ ದೇಹದಲ್ಲಿ ಆ್ಯಂಟಿಬಾಡಿಯಿದ್ದರೆ, ಅವರಿಗೆ ಕೊರೊನಾ ಅಥವಾ ಸಾರ್ಸ್ ಕೋವ್ 2 ವೈರಾಣು ಬಂದು ಹೋಗಿದೆ ಎಂದರ್ಥ. ಆದ್ದರಿಂದಲೇ ದೇಹದಲ್ಲಿ ಆ ವೈರಾಣು ವಿರುದ್ಧ ಹೋರಾಡಲು ಆ್ಯಂಟಿಬಾಡೀಸ್ ಉತ್ಪತ್ತಿಯಾಗಿರುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಹೋರಾಡಲಿದೆ ಎನ್ನುವದು ನೋಡಬೇಕಿದೆ ಎಂದಿದ್ದಾರೆ.
ಅದರಲ್ಲೂ ಸಿಂಪಲ್ ಆಂಟಿಬಾಡೀಸ್ ಇದ್ದರೆ ಈಗಾಗಲೇ ಕೊರೊನಾ ಬಂದು ಹೋಗಿದೆ ಎಂದರ್ಥ. ಆದರೆ ಇದು ಕೊರೊನಾ ಮತ್ತೊಮ್ಮೆ ಬಂದರೆ ಹೋರಾಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಯಿಲ್ಲ ಎನ್ನಲಾಗ್ತಿದೆ.