ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ. ಪ್ರಸ್ತುತ ದೇಶದಲ್ಲಿ ಸುಮಾರು 44 ಲಕ್ಷ ಕೊರೊನಾ ಪ್ರಕರಣಗಳಿವೆ. ಸುಮಾರು 74,000 ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ವಿವಿಧ ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಭಾರತದಲ್ಲಿ ಲಸಿಕೆ ಯಾವ ಹಂತದಲ್ಲಿದೆ ಎಂಬುದನ್ನು ಎನ್ಐಟಿಐ ಆಯೋಗ್ ಸದಸ್ಯ ಡಾ.ವಿ.ಕೆ.ಪಾಲ್ ಮಾಹಿತಿ ನೀಡಿದ್ದಾರೆ.
ಐಸಿಎಂಆರ್- ಭಾರತ್ ಬಯೋಟೆಕ್ ಲಸಿಕೆ ಮೊದಲ ಹಂತವನ್ನು ಪೂರ್ಣಗೊಳಿಸಿದೆ. 2 ನೇ ಹಂತದ ಪರೀಕ್ಷೆಗೆ ಕಾರ್ಯಕರ್ತರ ನೋಂದಣಿ ಪ್ರಾರಂಭವಾಗಿದೆ. ಇದು ಸ್ಥಳೀಯ ಲಸಿಕೆಯಾಗಿದೆ.
ಜೈಡಸ್ ಕ್ಯಾಡಿಲಾ ಲಸಿಕೆಯು ಹಂತ ಒಂದನ್ನು ಮುಗಿಸಿದೆ. ಎರಡನೇ ಹಂತದ ಪರೀಕ್ಷೆ ನಡೆಯುತ್ತಿದೆ. ಇದು ಕೂಡ ಭಾರತೀಯ ಲಸಿಕೆಯಾಗಿದೆ.
ಇದಲ್ಲದೆ ಟ್ರಯಲ್ ಸೀರಮ್ ಇನ್ಸ್ಟಿಟ್ಯೂಟ್ ಸಹ ಸಂಶೋಧನೆ ಮಾಡ್ತಿದೆ. ಸೀರಮ್ ಆಕ್ಸ್ ಫರ್ಡ್ ಲಸಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅಸ್ಟ್ರಾಜೆನೆಕಾ ಅದರ ಮೂಲ ಕಂಪನಿಯಾಗಿದೆ. ಈಗ ಭಾರತದ ಸೀರಮ್ ಸಹ ಇದಕ್ಕೆ ಸಹಾಯ ಮಾಡುತ್ತಿದೆ. ಇದರ 3 ನೇ ಹಂತದ ಪ್ರಯೋಗ ಮುಂದಿನ ವಾರದಿಂದ ಪ್ರಾರಂಭವಾಗಲಿದೆ.
ರಷ್ಯಾದ ಕೋರಿಕೆಯ ಮೇರೆಗೆ ಭಾರತ ರಷ್ಯಾ ಲಸಿಕೆ ಬಗ್ಗೆ ಚರ್ಚೆ ನಡೆಸುತ್ತಿದೆ. ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಪ್ರಯೋಗ ಮತ್ತು ಉತ್ಪಾದನೆ ವಿಷ್ಯಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಚರ್ಚೆ ನಡೆಯುತ್ತಿದೆ.