ನಟಿ ಕಂಗನಾ ಮತ್ತು ಶಿವಸೇನೆ ನಡುವಿನ ಮಾತಿನ ಯುದ್ಧ ಮುಂದುವರೆದಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಮಾದಕ ದ್ರವ್ಯ ಸಂಪರ್ಕದ ಬಗ್ಗೆ ತನಿಖೆ ಆರಂಭಿಸುವುದಾಗಿ ಘೋಷಿಸಿದೆ. ಕಂಗನಾ ಮಾಜಿ ಗೆಳೆಯ ಅಧ್ಯಯನ ಸುಮನ್ ಹಳೆಯ ಸಂದರ್ಶನದ ಆಧಾರದ ಮೇಲೆ, ಈಗ ಕಂಗನಾ ವಿರುದ್ಧ ಡ್ರಗ್ಸ್ ತನಿಖೆ ಪ್ರಾರಂಭಿಸಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಶಿವಸೇನೆ ನಾಯಕರಾದ ಸುನಿಲ್ ಪ್ರಭು ಮತ್ತು ಪ್ರತಾಪ್ ಸರ್ನಾಯಕ್, ಅಧ್ಯಯನ್ ಸುಮನ್ ಹಳೆಯ ಸಂದರ್ಶನದ ಪ್ರತಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ ಮಹಾರಾಷ್ಟ್ರ ಗೃಹ ಸಚಿವರು, ಕಂಗನಾ, ಅಧ್ಯಯನ್ ಸುಮನ್ ಅವರನ್ನು ಪ್ರೀತಿಸುತ್ತಿದ್ದರು. ಕಂಗನಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಮತ್ತು ನನಗೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂದು ಸುಮನ್ ಹೇಳಿದ್ದರು. ಈ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಕಂಗನಾ, ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದಾರೆ. ನಂತರ ಕಂಗನಾ ಮತ್ತು ಶಿವಸೇನೆ ನಡುವೆ ಮೌಖಿಕ ಯುದ್ಧ ಪ್ರಾರಂಭವಾಗಿದೆ. ಕಂಗನಾ ಈ ಹೇಳಿಕೆಯ ನಂತರ, ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಕಂಗನಾ ಮುಂಬೈಗೆ ಬರದಂತೆ ಸೂಚಿಸಿದ್ದರು. ಕಂಗನಾ, ಸೆಪ್ಟೆಂಬರ್ 9 ರಂದು ಮುಂಬೈಗೆ ಬರುವುದಾಗಿ ಘೋಷಿಸಿದ್ದಾರೆ.