
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಅವರ ಐಷಾರಾಮಿ ಜೀವನದ ಬಗ್ಗೆ ಹಲವಾರು ಅಂಶಗಳು ಬಯಲಾಗುತ್ತಿದೆ. ಸಂಜನಾಳ ಹೈಫೈ ಲೈಫ್ ಹಿಂದೆ ರಾಜಕಾರಣಿಯೊಬ್ಬರ ನಂಟಿದೆ ಎನ್ನಲಾಗಿದೆ.
ನಟಿ ಸಂಜನಾಳ ಐಷಾರಾಮಿ ಜೀವನ ಹಾಗೂ ಆಕೆಯ ಎಲ್ಲಾ ಖರ್ಚುವೆಚ್ಚಗಳನ್ನು ಹೆಸರಾಂತ ರಾಜಕಾರಣಿಯೊಬ್ಬರು ನೋಡಿಕೊಳ್ಳುತ್ತಿದ್ದರು. ಸಂಜನಾ ಹಾಗೂ ಆಕೆಯ ಸ್ನೇಹಿತನಿಂದ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಪಾರ್ಟಿಗೂ ಈ ರಾಜಕಾರಣಿಗೂ ನಂಟಿದೆ ಎನ್ನಲಾಗಿದೆ.
ನಟಿ ಸಂಜನಾ ಆಪ್ತ ರಾಹುಲ್ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಕ್ಯಾಸಿನೊ ನಡೆಸುತ್ತಿದ್ದು, ಇಲ್ಲಿ ಹಲವಾರು ಐಷಾರಾಮಿ ಪಾರ್ಟಿ ಏರ್ಪಡಿಸಿ, ಖ್ಯಾತ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುತ್ತಿದ್ದರು. ಇಲ್ಲಿ ನಡೆಯುವ ಹಲವು ಪಾರ್ಟಿಗಳಿಗೆ ಖ್ಯಾತ ರಾಜಕಾರಣಿಯೊಬ್ಬರು ಭಾಗವಹಿಸುತ್ತಿದ್ದು, ಕ್ಯಾಸಿನೊದಲ್ಲಿ ಹಣ ಹಾಕುತ್ತಿದ್ದರು ಎನ್ನಲಾಗಿದೆ.
ಒಟ್ಟಾರೆ ನಟಿ ಸಂಜನಾ ಅವರ ಐಷಾರಾಮಿ ಜೀವನದ ಹಿಂದೆ ರಾಜ್ಯದ ಖ್ಯಾತ ರಾಜಕಾರಣಿಯೊಬ್ಬರ ಬೆಂಬಲವಿದ್ದು, ಸಂಜನಾಗೂ ರಾಜಕಾರಣಿಗೂ ಇರುವ ನಂಟೇನು ಎಂಬ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ.