ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇಕಡಾ 0.10 ರಷ್ಟು ಕಡಿಮೆಗೊಳಿಸಿದೆ. ಇದ್ರಿಂದ ಗ್ರಾಹಕರು ಮೊದಲಿಗಿಂತ ಕಡಿಮೆ ವೆಚ್ಚದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಕೊರೊನಾ ಸಂದರ್ಭದಲ್ಲಿ ಜನರಿಗೆ ಇದು ಅಗತ್ಯವಾಗಿದೆ. ಬ್ಯಾಂಕ್ ಗಳು ಎಂಸಿಎಲ್ಆರ್ ದರ ಕಡಿಮೆ ಮಾಡಿದ ಕಾರಣ ಗೃಹ ಸಾಲಗಳು, ವಾಹನ ಸಾಲಗಳು, ವೈಯಕ್ತಿಕ ಸಾಲಗಳು ಅಗ್ಗವಾಗಿವೆ. ಸಾಲದ ಇಎಂಐ ಕೂಡ ಕಡಿಮೆಯಾಗಲಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಬಿಡುಗಡೆ ಮಾಡಿದ ವರದಿ ಪ್ರಕಾರ, ಎಂಸಿಎಲ್ಆರ್ ಅನ್ನು ಕ್ರಮವಾಗಿ ಒಂದು ವರ್ಷ ಮತ್ತು ಆರು ತಿಂಗಳ ಸಾಲಗಳ ಮೇಲೆ ಶೇಕಡಾ 7.40 ರಿಂದ 7.30 ಕ್ಕೆ ಮತ್ತು ಶೇಕಡಾ 7.30ದಿಂದ ಶೇಕಡ 7.25 ಕ್ಕೆ ಇಳಿಸಿದೆ. ಬ್ಯಾಂಕಿನ ಹೊಸ ದರಗಳು ಸೋಮವಾರದಿಂದ ಅನ್ವಯವಾಗುತ್ತವೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಎಲ್ಲಾ ಅವಧಿಯ ಸಾಲಗಳಿಗೆ ಎಂಸಿಎಲ್ಆರ್ ಅನ್ನು ಶೇಕಡಾ 0.10 ರಷ್ಟು ಕಡಿಮೆಗೊಳಿಸಿದೆ. ಬ್ಯಾಂಕಿನ ಒಂದು ವರ್ಷದ ಸಾಲದ ಎಂಸಿಎಲ್ಆರ್ ಅನ್ನು ಕ್ರಮವಾಗಿ ಶೇಕಡಾ 7.55ಕ್ಕೆ, ಮೂರು ತಿಂಗಳು ಮತ್ತು ಆರು ತಿಂಗಳ ಎಂಸಿಎಲ್ಆರ್ ಅನ್ನು ಕ್ರಮವಾಗಿ ಶೇಕಡಾ 7.45 ಮತ್ತು ಶೇಕಡಾ 7.55 ಕ್ಕೆ ಇಳಿಸಲಾಗಿದೆ. ಬ್ಯಾಂಕಿನ ಹೊಸ ದರಗಳು ಸೆಪ್ಟೆಂಬರ್ 10 ರಿಂದ ಜಾರಿಗೆ ಬರಲಿವೆ.