ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಕ್ಕೆ ಮುಂದಾಗಿದೆ. ಬ್ಯಾಂಕ್ 535 ಆಫೀಸರ್ ಹುದ್ದೆ ನೇಮಕ ಮಾಡಿಕೊಳ್ಳಲಿದೆ.
ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಆನ್ಲೈನ್ನಲ್ಲಿ ಪ್ರಾರಂಭವಾಗಿದೆ. ಸೆಪ್ಟೆಂಬರ್ 29 ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಆನ್ಲೈನ್ ಪರೀಕ್ಷೆಯ ಆಧಾರದ ಮೇಲೆ ಪಿಎನ್ಬಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಒಟ್ಟು 200 ಅಂಕಗಳ ಪರೀಕ್ಷೆಯಿರಲಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು 2 ಗಂಟೆಗಳ ಅವಕಾಶ ಸಿಗ್ತಿದೆ. ಲಿಖಿತ ಪರೀಕ್ಷೆ ನಂತ್ರ ಸಂದರ್ಶನ ನಡೆಯಲಿದೆ. ಈ ಕೆಳಗಿನ ಹುದ್ದೆಗಳಿಗೆ ನೇಮಕ ನಡೆಯಲಿದೆ.
ವ್ಯಸ್ಥಾಪಕ (ರಿಸ್ಕ್): 160 ಪೋಸ್ಟ್
ವ್ಯವಸ್ಥಾಪಕ (ಕ್ರೆಡಿಟ್): 200 ಪೋಸ್ಟ್
ವ್ಯವಸ್ಥಾಪಕ (ಖಜಾನೆ): 30 ಹುದ್ದೆಗಳು
ಮ್ಯಾನೇಜರ್ (ಕಾನೂನು) : 25 ಹುದ್ದೆಗಳು
ಮ್ಯಾಂಗರ್ (ವಾಸ್ತುಶಿಲ್ಪಿ): 2 ಪೋಸ್ಟ್
ಮ್ಯಾನೇಜರ್ (ಸಿವಿಲ್): 8 ಹುದ್ದೆಗಳು
ವ್ಯವಸ್ಥಾಪಕ (ಆರ್ಥಿಕ): 10 ಹುದ್ದೆಗಳು
ಮ್ಯಾನೇಜರ್ (ಎಚ್ಆರ್): 10 ಪೋಸ್ಟ್
ಹಿರಿಯ ವ್ಯವಸ್ಥಾಪಕ (ರಿಸ್ಕ್) : 40 ಹುದ್ದೆಗಳು
ಹಿರಿಯ ವ್ಯವಸ್ಥಾಪಕ (ಕ್ರೆಡಿಟ್): 50 ಹುದ್ದೆಗಳು
ಸಾಮಾನ್ಯ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ವೇಳೆ 850 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಎಸ್ಸಿ,ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು 175 ರೂಪಾಯಿ ಪಾವತಿಸಬೇಕು.