ಹೈದರಾಬಾದ್: ತೆಲುಗು ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜಯಪ್ರಕಾಶ್ ರೆಡ್ಡಿ ಗುಂಟೂರು ಅಲ್ಲಘಟ್ಟದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.
‘ಬ್ರಹ್ಮಪುತ್ರುಡು’ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗಬ್ಬರ್ ಸಿಂಗ್’, ‘ಟೆಂಪರ್’ ಮೊದಲಾದ ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ತಮ್ಮ ಹೆಚ್ಚಿನ ಸಿನಿಮಾಗಳಲ್ಲಿ ರಾಯಲ್ ಸೀಮಾ ಉಪಭಾಷೆಯನ್ನು ಮಾತನಾಡುತ್ತಿದ್ದ ಜಯಪ್ರಕಾಶ್ ರೆಡ್ಡಿ ಅವರಿಗೆ 74 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಬಾತ್ ರೂಮ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.