ಬ್ರೆಜಿಲ್ನ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಸರ್ಫಿಂಗ್ ಕೌಶಲ್ಯದಿಂದ ತನ್ನ ಹೆತ್ತವರು ಹಾಗೂ ಜಗತ್ತಿನಾದ್ಯಂತ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ. ತನ್ನ ಸರ್ಫ್ ಬೋರ್ಡ್ ಮೇಲೆ ಯಾವುದೇ ನೆರವಿಲ್ಲದೇ ನಿಂತಿರುವ ಈ ಬಾಲಕ ಬಹಳ ಲೀಲಾಜಾಲವಾಗಿ ಸಮುದ್ರದ ಅಲೆಗಳ ಭೋರ್ಗರೆತದೊಂದಿಗೆ ಸರ್ಕಸ್ ಮಾಡುತ್ತಾನೆ.
ಜೋ ವಿಟರ್ ಹೆಸರಿನ ಈ ಬಾಲಕ ಇನ್ನೂ ಅಂಬೆಗಾಲು ಇಡುತ್ತಿದ್ದಾಗಲೇ ಸರ್ಫಿಂಗ್ ಮೇಲೆ ಆಸಕ್ತಿ ಬೆಳೆಸಿಕೊಂಡು ಬಂದಿದ್ದಾನೆ. ತನ್ನ ಎರಡನೇ ವಯಸ್ಸಿನಲ್ಲೇ ಯಾವುದೇ ನೆರವಿಲ್ಲದೇ ಸರ್ಫ್ಬೋರ್ಡ್ ಮೇಲೆ ನಿಂತುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಜೋ. ಈತನಿಗೆ ಒಂದು ವರ್ಷ ತುಂಬುವ ಮುನ್ನವೇ ಈಜು ಕಲಿಯಲು ಹೊರಟಿದ್ದನಂತೆ! ಈ ಪುಟಾಣಿ ತನ್ನ ತಂದೆ ಹಾಗೂ ಹಿರಿಯ ಅಕ್ಕನನ್ನು ನೋಡಿಕೊಂಡು ಈಜುವುದು ಹಾಗೂ ಸರ್ಫಿಂಗ್ ಮಾಡುವುದನ್ನು ಕಲಿತಿದ್ದಾನೆ.