ಬೆಂಗಳೂರು: ರಾಜ್ಯದಲ್ಲಿ ನಿನ್ನೆ 5773 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 4,04,324 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ನಿನ್ನೆ 8015 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 3,00,770 ಜನ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ 141 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 6134 ಕ್ಕೆ ಏರಿಕೆಯಾಗಿದೆ. 97,001 ಸಕ್ರಿಯ ಪ್ರಕರಣಗಳಿದ್ದು, 794 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ 126, ಬಳ್ಳಾರಿ 266, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 2942, ಬೀದರ್ 32, ಚಾಮರಾಜನಗರ 20, ಚಿಕ್ಕಬಳ್ಳಾಪುರ 82, ಚಿಕ್ಕಮಗಳೂರು 101, ಚಿತ್ರದುರ್ಗ 50, ದಕ್ಷಿಣ ಕನ್ನಡ 152, ದಾವಣಗೆರೆ 199 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಧಾರವಾಡ 29, ಗದಗ 87, ಹಾಸನ 128, ಹಾವೇರಿ 53, ಕಲಬುರಗಿ 141, ಕೊಡಗು 11, ಕೋಲಾರ 26, ಕೊಪ್ಪಳ 139, ಮಂಡ್ಯ 169, ಮೈಸೂರು 221, ರಾಯಚೂರು 22, ರಾಮನಗರ 11, ಶಿವಮೊಗ್ಗ 150, ತುಮಕೂರು 25, ಉಡುಪಿ 113, ಉತ್ತರಕನ್ನಡ 77, ವಿಜಯಪುರ 112, ಯಾದಗಿರಿ 137 ಜನರಿಗೆ ಸೋಂಕು ತಗುಲಿದೆ.
ನಿನ್ನೆ ಬೆಂಗಳೂರಿನಲ್ಲಿ 48, ಬಳ್ಳಾರಿ 7, ಬೆಳಗಾವಿ 8, ದಕ್ಷಿಣ ಕನ್ನಡ 8, ಧಾರವಾಡ 10, ಕೊಪ್ಪಳ 10, ಮೈಸೂರು 9, ಶಿವಮೊಗ್ಗ 8 ಜನ ಸೇರಿದಂತೆ ರಾಜ್ಯದಲ್ಲಿ 141 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.