ಲಾಕ್ ಡೌನ್ ನಂತ್ರ ತಿರುಪತಿ ಬಾಲಾಜಿ ಮಂದಿರದ ಬಾಗಿಲು ತೆರೆದಿದೆ. ದೇವರ ದರ್ಶನಕ್ಕೆ ಭಕ್ತರು ಬರ್ತಿದ್ದಾರೆ. ಹಿಂದಿನ ಶನಿವಾರ ಒಂದೇ ದಿನ 1 ಕೋಟಿ ಹಣ ಹುಂಡಿಗೆ ಬಂದಿದೆ ಎಂದು ಟಿಟಿಡಿ ಹೇಳಿದೆ.
ಲಾಕ್ ಡೌನ್ ನಂತ್ರ ಜೂನ್ 11ರಂದು ದೇವಸ್ಥಾನದ ಬಾಗಿಲು ತೆರೆಯಿತು. ಲಾಕ್ ಡೌನ್ ನಂತ್ರ ಶನಿವಾರವೇ ಅತಿ ಹೆಚ್ಚು ದೇಣಿಗೆ ಬಂದಿದೆ ಎಂದು ಟಿಟಿಡಿ ಹೇಳಿದೆ. 13,486 ಭಕ್ತರು ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ದೇಣಿಗೆ ನೀಡಿದ ಹಣವನ್ನು ಎಣಿಸಲಾಗಿದೆ.
ತಿರುಪತಿ ದೇವಾಲಯವು ದೇಶದ ಶ್ರೀಮಂತ ದೇವಾಲಯವಾಗಿದೆ. ದೇಶದ ಎಲ್ಲಾ ದೇವಾಲಯಗಳಿಗೆ ಹೋಲಿಸಿದರೆ, ಈ ದೇವಾಲಯಕ್ಕೆ ಹೆಚ್ಚು ನಗದು, ಆಭರಣ ಮತ್ತು ಇತರ ದೇಣಿಗೆ ಬರ್ತಿದೆ. ಈ ದೇವಸ್ಥಾನಕ್ಕೆ ಒಂದು ತಿಂಗಳಲ್ಲಿ 200 ಕೋಟಿ ರೂಪಾಯಿಗಳ ದೇಣಿಗೆ ಬರುತ್ತದೆ. ಮಾರ್ಚ್ 20ರಂದು ಲಾಕ್ ಡೌನ್ ಕಾರಣಕ್ಕೆ ದೇವಸ್ಥಾನದ ಬಾಗಿಲು ಹಾಕಲಾಗಿತ್ತು. ಇದ್ರಿಂದ ದೇವಸ್ಥಾನಕ್ಕೆ ಆದಾಯ ಸಿಕ್ಕಿರಲಿಲ್ಲ. ಒಂದು ರೂಪಾಯಿ ದೇಣಿಗೆ ಕೂಡ ಸಿಕ್ಕಿರಲಿಲ್ಲ. ದೇವಸ್ಥಾನದ ಬಾಗಿಲು ತೆರೆದ ನಂತ್ರ ಮೊದಲ ದಿನವೇ 25 ಲಕ್ಷ ರೂಪಾಯಿಗಳ ದೇಣಿಗೆ ಬಂದಿದೆ.