ಯುಎಸ್ ಎ ಡಾಲರ್ ಕುಸಿತದ ನಂತ್ರವೂ ಸೋಮವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ವಾರದ ಕೊನೆಯಲ್ಲಿ ಯುಎಸ್ ದುರ್ಬಲ ಆರ್ಥಿಕ ಪರಿಸ್ಥಿತಿ, ಕೊರೊನಾ ಆತಂಕಗಳನ್ನು ಹುಟ್ಟುಹಾಕಿತ್ತು. ಇದು ಚಿನ್ನದ ಬೆಲೆಯನ್ನು ಹೆಚ್ಚಿಸಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡಾ 0.2ರಷ್ಟು ಏರಿಕೆ ಕಂಡು 1,935.53 ಡಾಲರ್ ಪ್ರತಿ ಔನ್ಸ್ ಆಗಿದೆ. ದೇಶಿಯ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆ ಏರಿಕೆ ಕಂಡಿದೆ. ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆ 107 ರೂಪಾಯಿ ಅಂದ್ರೆ ಶೇಕಡಾ 0.21ರಷ್ಟು ಏರಿಕೆ ಕಂಡು 10 ಗ್ರಾಂಗೆ 50785 ರೂಪಾಯಿಯಾಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.
ಬೆಳ್ಳಿ ಬೆಲೆ 872 ರೂಪಾಯಿ ಹೆಚ್ಚಾಗಿದೆ. ಕೆ.ಜಿ. ಬೆಳ್ಳಿ ಬೆಲೆ ಸೋಮವಾರ 68138 ರೂಪಾಯಿಯಾಗಿದೆ. ಶುಕ್ರವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಂಡಿತ್ತು.