ಬಾಲಿವುಡ್ ನಟಿ ಕಂಗನಾಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ. ಮೂಲಗಳ ಪ್ರಕಾರ, ಕಂಗನಾಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರ್ತಿವೆ. ಹಾಗಾಗಿ ಭದ್ರತೆ ಹೆಚ್ಚಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
ಕಳೆದ ಒಂದು ವಾರದಿಂದ ಕಂಗನಾ ಮತ್ತು ಶಿವಸೇನೆ ಸಂಸದ ಸಂಜಯ್ ರೌತ್ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕಂಗನಾ ಇತ್ತೀಚೆಗೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಮುಂಬೈಗೆ ಹಿಂತಿರುಗದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ನಟಿ ಈ ಬಗ್ಗೆ ಹಲವಾರು ಟ್ವೀಟ್ ಮಾಡಿದ್ದರು.
ವೈ ಕೆಟಗರಿ ಭದ್ರತಾ ವ್ಯವಸ್ಥೆಯಡಿ ಒಟ್ಟು 11 ಭದ್ರತಾ ಸಿಬ್ಬಂದಿ ಇರುತ್ತಾರೆ. ಇಬ್ಬರು ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ. ಸಿಬ್ಬಂದಿ 24 ಗಂಟೆ ಕಂಗನಾಗೆ ಭದ್ರತೆ ನೀಡ್ತಾರೆ. ಮೂಲಗಳ ಪ್ರಕಾರ ಸಿಆರ್ಪಿಎಫ್ ಈ ಭದ್ರತಾ ಹೊಣೆ ಹೊರುತ್ತದೆ ಎನ್ನಲಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಕೂಡ ಕಂಗನಾಗೆ ಭದ್ರತೆ ನೀಡಲು ಮುಂದಾಗಿದೆ. ಕೆಲವು ದಿನಗಳ ಹಿಂದೆ ಭದ್ರತೆ ನೀಡುವಂತೆ ಕಂಗನಾ ತಂದೆ ರಾಜ್ಯದ ಡಿಜಿಪಿಗೆ ಪತ್ರ ಬರೆದಿದ್ದರು.