ಬೆಂಗಳೂರು: ಬಲವಂತವಾಗಿ ಮದ್ಯ ಕುಡಿಸಿ ಕಿರುಕುಳ ನೀಡುತ್ತಿರುವ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕ್ಕಮಾವಳ್ಳಿ ನಿವಾಸಿಯಾಗಿರುವ 27 ವರ್ಷದ ಮಹಿಳೆ ಬಸವನಗುಡಿ ಮಹಿಳಾ ಠಾಣೆಗೆ ಪತಿ ರವೀಂದ್ರನಾಥ್ ವಿರುದ್ಧ ದೂರು ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಸಣ್ಣ ವಿಷಯಕ್ಕೂ ಜಗಳವಾಗಿದೆ. ನೀನು ದಪ್ಪ ಆಗಿದ್ದೀಯಾ ಎಂದು ಹೀಯಾಳಿಸುತ್ತಿದ್ದ ಪತಿರಾಯ ಮನೆಗೇ ಮದ್ಯ ತಂದು ಪತ್ನಿಗೆ ಬಲವಂತವಾಗಿ ಕುಡಿಸುತ್ತಿದ್ದ. ಪಬ್ ಗಳಿಗೂ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸುತ್ತಿದ್ದ. ಕುಡಿಯಲು ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ರೆಸ್ಟೋರೆಂಟ್ ಕರೆದುಕೊಂಡು ಹೋಗಿ ವಿವಿಧಭಂಗಿಗಳಲ್ಲಿ ಪತ್ನಿ ಫೋಟೋ ತೆಗೆದುಕೊಂಡ ಆರೋಪಿ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಬಲವಂತ ಮಾಡಿದ್ದಾನೆ. ವರದಕ್ಷಿಣೆ ತರದಿದ್ದರೆ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ ಎಂದುಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.