‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರು ತಮ್ಮ ಫಿಟ್ನೆಸ್ ಟ್ರೈನರ್ ಲಕ್ಷ್ಮಣ ರೆಡ್ಡಿಗೆ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
‘ಬಾಹುಬಲಿ’ಯಾಗಲು ಪ್ರಭಾಸ್ ದೈಹಿಕ ಕಸರತ್ತು ನಡೆಸಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇದಾದ ನಂತರವೂ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಳ್ಳಲು ಫಿಟ್ನೆಸ್ ಟ್ರೈನರ್ ಲಕ್ಷ್ಮಣ ರೆಡ್ಡಿ ಅವರ ಪಾತ್ರ ಮಹತ್ವದ್ದಾಗಿದೆ.
ತಮ್ಮ ಯಶಸ್ಸಿಗೆ ಕಾರಣರಾದ ಸದಸ್ಯರಿಗೆ ಸಹಾಯಹಸ್ತ ಚಾಚುವ ಪ್ರಭಾಸ್ ಫಿಟ್ನೆಸ್ ಟ್ರೈನರ್ ಲಕ್ಷ್ಮಣ ರೆಡ್ಡಿ ಅವರಿಗೆ ಸುಮಾರು 73.30 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ವೇಲಾರ್ ಲಕ್ಸುರಿ ಎಸ್.ಯು.ವಿ. ಐಷಾರಾಮಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ.