ನೆದರ್ಲ್ಯಾಂಡ್: ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಬಾಸ್ಕೆಟ್ ಬಾಲ್ ನೆಟ್ ಕಟ್ಟಿಕೊಂಡು ತನ್ನ ಮಗನಿಗೆ ಬಾಸ್ಕೆಟ್ ಬಾಲ್ ಆಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಡಚ್ ಮೂಲದ Buitengebeden ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, 4,73,300 ಜನ ವೀಕ್ಷಿಸಿದ್ದಾರೆ. 1, 100 ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. 202 ರೀ ಟ್ವೀಟ್ ಆಗಿದೆ.
ಬಾಲಕ ಲಾಸ್ ಏಂಜಲೀಸ್ ಲೇಕರ್ಸ್ ನ ಪ್ರಸಿದ್ಧ ಬಾಸ್ಕೆಟ್ ಬಾಲ್ ಆಟಗಾರ ಲೀ ಬೋರ್ನ್ ಜೇಮ್ಸ್ ಅವರ ಜರ್ಸಿ ಸಂಖ್ಯೆ 23 ಧರಿಸಿದ್ದಾನೆ. ತಂದೆ ಬೆನ್ನಿಗೆ ಬಾಸ್ಕೆಟ್ ಬಾಲ್ ನೆಟ್ ಕಟ್ಟಿಕೊಂಡು ಮುಂದೆ ಹೋದರೆ, ಬಾಲಕ ಬಾಲ್ ಅನ್ನು ನೆಟ್ ನೊಳಗೆ ಹಾಕುವ ಪ್ರ್ಯಾಕ್ಟೀಸ್ ಮಾಡುತ್ತಿದ್ದಾನೆ.
ತಂದೆಯ ತೋಳು ಎಲ್ಲ ಮಕ್ಕಳಿಗೂ ರಕ್ಷಣೆ ನೀಡುತ್ತದೆ. ತರಬೇತಿ ನೀಡುತ್ತದೆ. ಇಲ್ಲಿಯೂ ಅಷ್ಟೇ ಮಗನಿಗೆ ತರಬೇತಿ ನೀಡಲು ತಂದೆ ಒಳ್ಳೆಯ ಉಪಾಯ ಕಂಡುಕೊಂಡಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
https://twitter.com/buitengebieden_/status/1301599385655091202?ref_src=twsrc%5Etfw%7Ctwcamp%5Etweetembed%7Ctwterm%5E1301599385655091202%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Flittle-boy-shoots-balls-into-basketball-net-fixed-on-fathers-shoulder-adorable-video-goes-viral%2F648007
https://twitter.com/espritscurieux/status/1301615433120841728?ref_src=twsrc%5Etfw%7Ctwcamp%5Etweetembed%7Ctwterm%5E1301615433120841728%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Flittle-boy-shoots-balls-into-basketball-net-fixed-on-fathers-shoulder-adorable-video-goes-viral%2F648007