
ಬೆಂಗಳೂರು: ತಾತ್ಕಾಲಿಕವಾಗಿ ಮುಂದೂಡಿದ್ದ ಸಿಇಟಿ ದಾಖಲಾತಿ ಸಲ್ಲಿಕೆ ಪ್ರಕ್ರಿಯೆಯನ್ನು ಸಪ್ಟೆಂಬರ್ 7ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಜೆಇಇ ಮುಖ್ಯಪರೀಕ್ಷೆ ಹಿನ್ನೆಲೆಯಲ್ಲಿ ಸಿಇಟಿ ದಾಖಲಾತಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 7 ರಿಂದ ರ್ಯಾಂಕ್ ಒಂದರಿಂದ 2000 ವರೆಗೆ ಹಾಗೂ ನಿಗದಿತ ದಿನಾಂಕಗಳಂದು ವಿವಿಧ ರ್ಯಾಂಕ್ ಆಧರಿಸಿ ವಿದ್ಯಾರ್ಥಿಗಳು ದಾಖಲಾತಿ ಅಪ್ಲೋಡ್ ಮಾಡಬೇಕಿದೆ.
ಜೆಇಇ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಮನವಿ ಮೆರೆಗೆ ಸೆಪ್ಟಂಬರ್ 2ರಿಂದ ಆರಂಭವಾಗಬೇಕಿದ್ದ ದಾಖಲಾತಿಯ ಪ್ರಕ್ರಿಯೆಯನ್ನು ಮುಂದೂಡಿದ್ದು ಸೆಪ್ಟಂಬರ್ 7 ರಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ.