ಬಾಲಿವುಡ್ ನಟಿ ಕಂಗನಾ ರಣಾವತ್ ಶಿಕ್ಷಕರ ದಿನಾಚರಣೆ ಅಂಗವಾಗಿ ತಮ್ಮ ಬಾಲ್ಯದ ವಾರ್ಷಿಕೋತ್ಸವ ದಿನದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದು 1ನೇ ತರಗತಿಯ ವಾರ್ಷಿಕ ದಿನದ ಚಿತ್ರ. ನಾವು ಪಹಡಿ ನಾಟಿ ಪ್ರದರ್ಶಿಸಿದ್ದೆವು. ಇದಕ್ಕಾಗಿ ನಮ್ಮ ಶಿಕ್ಷಕರಿಂದ ಉಡುಗೊರೆಯನ್ನು ಪಡೆದುಕೊಂಡಿದ್ದೆವು.
ಅನೇಕ ಮಹಾನ್ ಶಿಕ್ಷಕರು ನನ್ನ ಜೀವನಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸೇರಿದ್ದಾರೆ. ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CEvi4ZXlHUY/?igshid=18lvz1sink8e7