ಕೊರೊನಾ ಕಾಲದಲ್ಲಿ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ಅಧ್ಯಾಪಕಿಯೊಬ್ಬರು ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವಾಗ್ಲೇ ಕೆಳಗೆ ಬಿದ್ದಿದ್ದಾರೆ.
ವಿದ್ಯಾರ್ಥಿಗಳು ಜೂಮ್ ಅಪ್ಲಿಕೇಷನ್ ಮೂಲಕ ಪಾಠ ಹೇಳ್ತಿದ್ದ ಶಿಕ್ಷಕಿ ಆರೋಗ್ಯ ಹದಗೆಟ್ಟುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಮನೆ ವಿಳಾಸ ಕೇಳಿದ್ದಾರೆ. ಆದ್ರೆ ಅದನ್ನು ಹೇಳಲು ಆಗ್ತಿಲ್ಲವೆಂದು ಶಿಕ್ಷಕಿ ಹೇಳಿದ್ದಾರೆ.
ಶಿಕ್ಷಕಿಗೆ 4 ವಾರಗಳಿಂದ ಕೊರೊನಾ ಕಾಡ್ತಾಯಿತ್ತು. ಉಸಿರಾಡಲು ಸಮಸ್ಯೆಯಾಗ್ತಿತ್ತು. ಈ ಮಧ್ಯೆಯೂ ಅವರು ಮಕ್ಕಳಿಗೆ ಪಾಠ ಮುಂದುವರೆಸಿದ್ದರು. ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. 44 ವರ್ಷದ ಅಧ್ಯಾಪಕಿ ಪಾವೊಲಾ ಡಿ ಸಿಮೋನೆ ಸಾವನ್ನಪ್ಪಿದ್ದಾರೆ. ಕಳೆದ 15 ವರ್ಷಗಳಿಂದ ಅವ್ರು ಪಾಠ ಹೇಳ್ತಿದ್ದರಂತೆ. ಶಿಕ್ಷಕಿ ಸಾವು ಎಲ್ಲರ ನೋವಿಗೆ ಕಾರಣವಾಗಿದೆ.