ನೀವು ಭಾರತದಲ್ಲೇ ಇದ್ದರೆ, ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದರ ಪಟ್ಟಿಯಲ್ಲಿ ಗೋವಾ ಇದ್ದೇ ಇರುತ್ತದೆ.
ಕಡಲ ತೀರದ ವಿಹಾರ, ಮೋಜು-ಮಸ್ತಿ, ಕುಡಿತ, ಕುಣಿತದಂತಹ ಸುಖ ಅನುಭವಿಸಲು ಕಾತರರಾಗಿರುತ್ತೀರಿ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ ದೇಶಾದ್ಯಂತ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬಾರ್, ರೆಸ್ಟೋರೆಂಟ್ ಎಲ್ಲವನ್ನೂ ಆರಂಭಿಸಲು ಅನುಮತಿ ನೀಡಿರುವುದಂತೂ ಉದ್ಯಮಿಗಳಲ್ಲಿ ಹಾಗೂ ಪ್ರವಾಸಿಗರಲ್ಲಿ ಉತ್ಸಾಹ ಇಮ್ಮಡಿಯಾಗಿಸಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೊರತುಪಡಿಸಿ, ಸ್ಥಳೀಯ ಪ್ರವಾಸಿಗರು ಕೊರೊನಾ ನೆಗಟೀವ್ ಪ್ರಮಾಣ ಪತ್ರ ಹಿಡಿದು ಬರಬೇಕು ಎಂಬ ನಿಯಮವೂ ಇಲ್ಲ.
ಇದರಿಂದ ಗಾಬರಿಯಾಗಿರುವ ಗೋವಾ ಮಂದಿ, ಪ್ರವಾಸೋದ್ಯಮದಿಂದಲೇ ಆರ್ಥಿಕತೆ ನೆಚ್ಚಿಕೊಂಡಿರುವ ಸರ್ಕಾರ ಭಾರೀ ನಷ್ಟ ಅನುಭವಿಸಿರುವುದೇನೋ ನಿಜ. ಹಾಗೆಂದು ಕೊರೊನಾ ಇದ್ದವರು, ಇಲ್ಲದವರು ಎಲ್ಲರಿಗೂ ಅವಕಾಶ ಕೊಟ್ಟರೆ ಹೇಗೆ ? ಇಲ್ಲಿನ ವೈದ್ಯಕೀಯ ಸೇವೆಯೂ ಅಷ್ಟಕ್ಕಷ್ಟೆ ? ಪ್ರವಾಸಿಗರಿಂದ ಸ್ಥಳೀಯರ ಜೀವಕ್ಕೆ ಕುತ್ತು ಬಂದರೆ ಕಾಪಾಡುವರು ಯಾರು ? ಕೈಮುಗಿದು ಕೇಳುತ್ತೇವೆ ? ಗೋವಾಕ್ಕೆ ಯಾರೂ ಬರಬೇಡಿ ಎಂದು ಜಾಲತಾಣದಲ್ಲಿ ಅಭಿಯಾನ ಕೈಗೊಂಡಿದ್ದಾರೆ.