alex Certify ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರಿಯಾ ಸಹೋದರ ಶೋವಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರಿಯಾ ಸಹೋದರ ಶೋವಿಕ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲೂ ಡ್ರಗ್ಸ್ ಮಾಫಿಯಾ ನಂಟು ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಎನ್.ಸಿ.ಬಿ.ಯಿಂದ ಬಂಧನಕ್ಕೊಳಗಾಗಿರುವ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.

ಅಕ್ಕ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿ ಮಾಡುತ್ತಿರುವುದಾಗಿ ಶೋವಿಕ್ ಚಕ್ರವರ್ತಿ ಎನ್.ಸಿ.ಬಿ. ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಅಲ್ಲದೇ ಡ್ರಗ್ಸ್ ಖರೀದಿಗಾಗಿ ಬಾಸಿತ್ ಪರಿಹಾರ್ ಮತ್ತು ಜೈದ್ ಎಂಬುವವರ ಸಂಪರ್ಕದಲ್ಲಿದ್ದುದಾಗಿ ತಿಳಿಸಿದ್ದಾನೆ.

ಬಾಸಿತ್ ಮೂಲಕವೇ ಶೋವಿಕ್ ಡ್ರಗ್ಸ್ ಪೆಡ್ಲರ್ ಸೋಹೆಲ್ ನನ್ನು ಭೇಟಿಯಾಗಿ ಆತನಿಂದಲೇ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಸುಶಾಂತ್ ಆಪ್ತ ಸಹಾಯಕನಾಗಿದ್ದ ಸ್ಯಾಮ್ಯುಯೆಲ್ ಮಿರಾಂಡಾ ಎನ್.ಸಿ.ಬಿ. ವಿಚಾರಣೆ ವೇಳೆ ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸುತ್ತಿದ್ದುದಾಗಿ ಹೇಳಿದ್ದಾನೆ ಎಂದು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...