ಇಡೀ ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡರುವ ಮಧ್ಯೆ ಬೆಂಗಳೂರಿನ ಕೆಲ ರಸ್ತೆ ಬದಿ ಗೋಡೆಗಳು ಮಾತ್ರ ಚಿತ್ರಗಳಿಂದ ತುಂಬಿವೆ. ಈ ಎಲ್ಲ ಚಿತ್ರಗಳು ಕೊರೊನಾ ಜಾಗೃತಿಗೆ ಸಂಬಂಧಿಸಿದವುಗಳೇ ಆಗಿವೆ.
ಬೆಂಗಳೂರು ಮೂಲದ ಕಲಾವಿದ ಬಾದಲ್ ನಂಜುಂಡಸ್ವಾಮಿ, ಬೆಂಗಳೂರಿನ ರಸ್ತೆ ಬದಿಯ ಗೋಡೆಗಳ ಮೇಲೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಕೊರೊನಾದಿಂದ ತಪ್ಪಿಸಿಕೊಳ್ಳಲು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತಾದ ಚಿತ್ರಗಳನ್ನು ಬಿಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಅನೇಕರು ಮಾಸ್ಕ್ ಧರಿಸದೇ ಇರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಗ್ರಾಫಿಟಿಗಳನ್ನು ಬಿಡಿಸಿದೆ. ಈ ಚಿತ್ರಗಳಿಂದ ಜಾಗೃತಿ ಮೂಡಿಸುವುದು ಸುಲಭ ಎನ್ನುವ ಮಾತನ್ನು ಹೇಳಿದ್ದಾರೆ.