ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲು ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿದೆ. ಇದ್ರ ವೆಬ್ಸೈಟ್ ನಲ್ಲಿ ಶಿಕ್ಷಣ ಸಾಲಗಳು ಮತ್ತು ಬ್ಯಾಂಕುಗಳ ಇತರ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಿದೆ.
ಪ್ರಧಾನ್ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿ ವಿದ್ಯಾರ್ಥಿಗಳು 13 ಬ್ಯಾಂಕುಗಳಿಂದ 126 ರೀತಿಯ ಸಾಲಗಳನ್ನು ಪಡೆಯಬಹುದು. ಯೋಜನೆಯಡಿ ವಿದ್ಯಾರ್ಥಿಗಳು ಸಾಲಕ್ಕಾಗಿ ಕೇವಲ ಒಂದು ಫಾರ್ಮ್ ಭರ್ತಿ ಮಾಡಬೇಕು. ಇದ್ರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಯಾವುದೇ ಹಣದ ಕೊರತೆಯಾಗುವುದಿಲ್ಲ.
ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು. ವೆಬ್ಸೈಟ್ ಮೂಲಕ ದೂರನ್ನು ಕೂಡ ನೀಡಬಹುದು. 13 ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಸೇರಿವೆ. ಎಲ್ಲ ಬ್ಯಾಂಕ್ ಗಳ ಬಡ್ಡಿ ದರ ಬೇರೆ ಬೇರೆಯಿದೆ.
ಈ ಯೋಜನೆಯಡಿ 4 ಲಕ್ಷ ರೂಪಾಯಿವರೆಗಿನ ಶೈಕ್ಷಣಿಕ ಸಾಲಗಳಿಗೆ ಯಾವುದೇ ಭದ್ರತೆಯನ್ನು ಜಮಾ ಮಾಡುವ ಅಗತ್ಯವಿಲ್ಲ. 4 ರಿಂದ 6.5 ಲಕ್ಷ ರೂಪಾಯಿಗಳವರೆಗೆ ಶೈಕ್ಷಣಿಕ ಸಾಲವನ್ನು ತೆಗೆದುಕೊಂಡರೆ, ಮೂರನೇ ವ್ಯಕ್ತಿಯು ಇದಕ್ಕೆ ಖಾತರಿ ನೀಡಬೇಕಾಗುತ್ತದೆ. 6.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಶಿಕ್ಷಣ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಆಸ್ತಿ ಅಡಮಾನವನ್ನು ತೆಗೆದುಕೊಳ್ಳಬೇಕಾಗಬಹುದು.