ಕೊರೊನಾ ಕಡಿಮೆಯಾಗುವಂತೆ ಕಾಣ್ತಿಲ್ಲ. ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾದ ಹೊಸ ಹೊಸ ಲಕ್ಷಣಗಳು ಭಯ ಹುಟ್ಟಿಸುತ್ತಿವೆ. ಈಗ ಬ್ರಿಟನ್ ಸಂಶೋಧಕರು ಕೊರೊನಾದ ಹೊಸ ಲಕ್ಷಣದ ಬಗ್ಗೆ ಹೇಳಿದ್ದಾರೆ.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅತಿಸಾರ, ವಾಂತಿ, ಹೊಟ್ಟೆ ನೋವು ಕೂಡ ಕೊರೊನಾ ಲಕ್ಷಣವೆಂದು ಸಂಶೋಧಕರು ಹೇಳಿದ್ದಾರೆ. ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್ ಮಕ್ಕಳ ಮೇಲೆ ಅಧ್ಯಯನ ನಡೆಸಿದೆ. ಕೊರೊನಾ ರೋಗ ಲಕ್ಷಣದಲ್ಲಿ ಇದನ್ನು ಸೇರಿಸಬೇಕೆಂದು ಸಂಶೋಧಕರು ಹೇಳಿದ್ದಾರೆ.
ಜ್ವರ, ಕೆಮ್ಮು, ರುಚಿ ತಿಳಿಯದಿರುವುದು ಹಾಗೂ ವಾಸನೆ ಗೊತ್ತಾಗದಿರುವುದು ಕೊರೊನಾ ಲಕ್ಷಣವೆನ್ನಲಾಗಿದೆ. ಆದ್ರೆ ಈಗ ಈ ಹೊಸ ಲಕ್ಷಣವನ್ನೂ ಕೊರೊನಾ ಲಕ್ಷಣದಲ್ಲಿ ಸೇರಿಸಬೇಕೆಂದು ಸಂಶೋಧಕರು ಹೇಳಿದ್ದಾರೆ. ಒಂದು ಸಾವಿರ ಮಕ್ಕಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಅದ್ರಲ್ಲಿ 68 ಮಕ್ಕಳ ಶರೀರದಲ್ಲಿ ಪ್ರತಿರೋಧಕ ಶಕ್ತಿ ಕಾಣಿಸಿದೆ. ಹಾಗೆ ಕೊರೊನಾ ಹೊಸ ಲಕ್ಷಣ ಕೂಡ ಕಾಣಿಸಿದೆ. ಆದ್ರೆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಬಂದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.