alex Certify ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ: ಸಹೋದರನಿಂದಲೇ ಡ್ರಗ್ಸ್‌ ತರಿಸಿದ್ದ ರಿಯಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ: ಸಹೋದರನಿಂದಲೇ ಡ್ರಗ್ಸ್‌ ತರಿಸಿದ್ದ ರಿಯಾ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಮುಂದುವರೆದಿದೆ. ದಿನಕ್ಕೊಂದು ಆಘಾತಕಾರಿ ವಿಷ್ಯ ಬಹಿರಂಗವಾಗ್ತಿದೆ. ಸಿಬಿಐ ಈ ಪ್ರಕರಣದ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದರೆ, ಮಾದಕವಸ್ತು ನಿಯಂತ್ರಣ ಬ್ಯೂರೋ ಸಹ ಈ ಪ್ರಕರಣದಲ್ಲಿ ಡ್ರಗ್ಸ್ ವಿಚಾರದಲ್ಲಿ ವಿಚಾರಣೆ ನಡೆಸುತ್ತಿದೆ.

ಡ್ರಗ್ಸ್ ಬಗ್ಗೆ ವಿಚಾರಣೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ಬ್ಯೂರೋ ಐದು ಜನರನ್ನು ಬಂಧಿಸಿದೆ. ರಿಯಾ ಚಕ್ರವರ್ತಿ ವಾಟ್ಸಾಪ್ ಚಾಟ್ ಬಹಿರಂಗವಾಗಿದೆ. ರಿಯಾ ಸಹೋದರ ಶೋವಿಕ್ ಚಕ್ರವರ್ತಿ ವಾಟ್ಸಾಪ್ ಚಾಟ್ ‌ಗಳು ಹೊರಬಂದಿದ್ದು, ಇದರಲ್ಲಿ ಇಬ್ಬರು ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ.

ಶೋವಿಕ್ ಗೆ ರಿಯಾ ಬಡ್ ತರುವಂತೆ ಕೇಳ್ತಾಳೆ. ಇದಕ್ಕೆ ಶೋವಿಕ್ ಪ್ರತಿಕ್ರಿಯೆ ನೀಡಿದ್ದಾರೆ. 5 ಗ್ರಾಮ್ ಬಡ್ ತರುವುದಾಗಿ ಹೇಳ್ತಾನೆ. ಬಡ್ ಒಂದು ರೀತಿಯ ಡ್ರಗ್ಸ್. ಇದಕ್ಕೆ ಮುಂಬೈನಲ್ಲಿ ಹೆಚ್ಚು ಬೇಡಿಕೆಯಿದೆ. ಕೊಕೇನ್ ಗಿಂತ ಇದ್ರ ಬೆಲೆ ಹೆಚ್ಚು. ಮಾರ್ಚ್ 15ರ ಮೆಸ್ಸೇಜ್ ಇದು. ದಿನದಲ್ಲಿ ನಾಲ್ಕು ಬಾರಿ ಆತನಿಗೆ ಬೇಕು. ಹಾಗಾಗಿ ಅದೇ ರೀತಿ ಪ್ಲಾನ್ ಮಾಡಿ ಬಡ್ ತರಿಸು ಎಂದು ಆಕೆ ಚಾಟ್ ನಲ್ಲಿ ಹೇಳಿದ್ದಾಳೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಶುರುವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...