‘ಸಾಥ್ ನಿಭಾಯಾ ಸಾಥಿಯಾ’ ಎಂಬ ಪ್ರಸಿದ್ಧ ಧಾರಾವಾಹಿಯ ‘ರಸೋದೆಮೆ ಕೌನ್ ಥಾ’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ. ಈ ವಾಕ್ಯ ಸೇರಿಸಿ ಸಾಕಷ್ಟು ಮಿಮ್ಸ್ ಗಳು ರಚನೆಯಾಗಿ ಹರಿದಾಡುತ್ತಿವೆ. ಈಗ ಆ ಸಾಲಿಗೆ ಹೊಸದೊಂದು ಸೇರಿಕೊಂಡಿದೆ.
ಅಸ್ಸಾಂ ಪೊಲೀಸರು ಡ್ರಗ್ ಡೀಲರ್ ಗಳಿಬ್ಬರನ್ನು ಹಿಡಿದ ಸುದ್ದಿಯನ್ನು ಇದೇ ಸಾಲುಗಳನ್ನು ಬಳಸಿಕೊಂಡು ಟ್ವಿಟರ್ ನಲ್ಲಿ ಹಾಕಲಾಗಿದೆ.
“ರಸೋದೆ ಮೆ ದೋ ಡ್ರಗ್ಸ್ ಪೆಡ್ಲರ್ ಥಾ
ಕಾರ್ಟೂನ್ ಸೆ ಲೈವ್ ಸಾಪ್ ಔರ್ ವಿಟಮಿನ್ ನಿಕಲಾ ದಿಯಾ
ಔರ್ ಕೊಡೆಕ್ಸ್ ಒರ್ ಡ್ರಗ್ಸ್ ಚುಪಾ ದಿಯಾ ಇತನೆಮೆ ಟೀಮ್ ನಾಗೋನ್ ಆಯಿ ಔರ್ ದೋನೋ ಕೋ ಉಟಾ ದಿಯಾ” ಎಂದು ಹಿಂದಿಯನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.
“ಅಡುಗೆ ಮನೆಯಲ್ಲಿ ಇಬ್ಬರು ಡ್ರಗ್ ಡೀಲರ್ ಗಳಿದ್ದರು. ರಟ್ಟಿನ ಪೆಟ್ಟಿಗೆಯಿಂದ ವಿಟಮಿನ್ ತೆಗೆದರು ಡ್ರಗ್ಸ್ ಅಡಗಿಸಿಟ್ಟರು. ಅಷ್ಟರಲ್ಲಿ ಟೀಮ್ ನಾಗೊನ್ ಬಂದು ಇಬ್ಬರನ್ನು ಎತ್ತಿಕೊಂಡು ಹೋಯಿತು” ಎಂದು ಬರೆಯಲಾಗಿದೆ. ಪೊಲೀಸರ ಈ ಸಾಲುಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.