ಫ್ಲೋರಿಡಾ: ಶಾರ್ಕ್ ಕಚ್ಚಿದರೆ ನಾವು ರಕ್ಷಣೆಗಾಗಿ ಕೂಗಿಕೊಳ್ಳುತ್ತೇವೆ ಅಥವಾ ಓಡಲಾರಂಭಿಸುತ್ತೇವೆ. ಆದರೆ, ಈ ಧೈರ್ಯವಂತ ಅದಕ್ಕೆ ವಿರುದ್ಧವಾಗಿ ಮಾಡಿದ್ದಾನೆ.
ಪ್ಲೋರಿಡಾದ ಜಾನ್ಸನ್ ಬೀಚ್ ನ ನೀರಿನಲ್ಲಿ ಆಡುತ್ತಿದ್ದ ವ್ಯಕ್ತಿಯೊಬ್ಬನ ತೋಳಿಗೆ ಅಕಸ್ಮಾತ್ ಮರಿ ಶಾರ್ಕ್ ವೊಂದು ಕಚ್ಚಿ ಹಿಡಿದಿತ್ತು. ಆದರೆ, ಅದಕ್ಕೆ ಹೆದರದ ಆತ ಅದನ್ನೇ ಒತ್ತಿ ಹಿಡಿದುಕೊಂಡಿದ್ದ.
ಒಂದೆರಡು ನಿಮಿಷವಲ್ಲ. ಬರೊಬ್ಬರಿ 45 ನಿಮಿಷದವರೆಗೆ ರಕ್ಷಣಾ ತಂಡ ಆಗಮಿಸುವವರೆಗೂ ಆತ ಹಾಗೇ ಶಾಂತವಾಗಿ ನಿಂತಿದ್ದ. ಕಡಲ ತೀರದಲ್ಲಿದ್ದ ವ್ಯಕ್ತಿಯೊಬ್ಬರು ಅದರ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿದ್ದಾರೆ.
ಶಾರ್ಕ್ ಬಾಯಿ ತುಂಬ ಚೂಪಾದ ಹಲ್ಲುಗಳನ್ನು ಹೊಂದಿರುತ್ತವೆ. ಮಾನವನಿಗೆ ಕಚ್ಚುವ ಮೀನುಗಳಲ್ಲಿ ಅವು ನಾಲ್ಕನೇ ಸ್ಥಾನದಲ್ಲಿವೆ ಎಂದು ನ್ಯಾಷನಲ್ ಜಿಯೋಗ್ರಫಿ ಚಾನಲ್ ವರದಿ ಮಾಡಿದೆ.