ಇತಿಹಾಸದಲ್ಲಿ ಕಲ್ಲಿನಲ್ಲಿ ಸಂಗೀತ ಸ್ವರ ಹುಟ್ಟಿಸಿದ್ದರು. ಇತ್ತೀಚೆಗೆ ಕೆಲವರು ತಟ್ಟೆ, ಬಟ್ಟಲು, ಡಬ್ಬಿ ಏನ್ ಸಿಗ್ತೊ ಅದನ್ನೆಲ್ಲ ತಗೊಂಡು ಸಂಗೀತ ಕಚೇರಿ ಮಾಡುವ ವಿಡಿಯೋಗಳು ಅಂತರ್ಜಾಲದಲ್ಲಿ ಅಲೆದಾಡುತ್ತಿರುತ್ತವೆ. ಇಲ್ಲೊಬ್ಬ ಸ್ವಲ್ಪ ಡಿಫರೆಂಟ್. ಹಣ್ಣಿನಿಂದಲೂ ಸಂಗೀತ ಸ್ವರ ಹುಟ್ಟಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರಾಕ್ಸ್ ಚಾಪ್ ಮ್ಯಾನ್ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷದ ವಿಡಿಯೋವನ್ನು 4 ಲಕ್ಷ ಜನ ವೀಕ್ಷಿಸಿದ್ದಾರೆ.
ಸಂಗೀತಗಾರ ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳನ್ನು ಚಿಕ್ಕ ಹೋಳುಗಳಾಗಿ ಮಾಡಿ ಪ್ಲೇಟ್ ಒಂದರ ಮೇಲೆ ಕೀ ಬೋರ್ಡ್ ನ ಕೀಗಳಂತೆ ಜೋಡಿಸಿದ್ದಾನೆ. ಅದರ ಬಲಬದಿಗೆ ಒಂದು ಕಿವಿ ಹಣ್ಣನ್ನು ಎರಡು ಹೋಳು ಮಾಡಿ ಇಟ್ಟಿದ್ದಾನೆ. ಹಣ್ಣಿನ ತುಂಡುಗಳಿಗೆ ವೈಯರ್ ಗಳನ್ನು ಸಿಕ್ಕಿಸಿ ಮೆಟಲ್ ಬೋರ್ಡ್ ಒಂದಕ್ಕೆ ಸಂಪರ್ಕ ಕೊಟ್ಟಿದ್ದಾನೆ. ಅದನ್ನು ತನ್ನ ಲ್ಯಾಪ್ ಟಾಪ್ ನೊಟ್ಟಿಗೆ ಸಂಪರ್ಕಿಸಿದ್ದಾನೆ. ಅಷ್ಟೇ ಅಲ್ಲ, ಪೆಡಲ್ ಹಾಗೂ ಡ್ರಂ ಕೂಡ ತಂದಿಟ್ಟಿದ್ದಾನೆ. ಒಟ್ಟಿನಲ್ಲಿ ಆತ ಒಂದು ಸಂಪೂರ್ಣ ಸಂಗೀತ ಸಾಧನವನ್ನು ತಂದಿಟ್ಟು ಕಚೇರಿ ಶುರು ಮಾಡಿದರೆ, ಅದು ಹಣ್ಣಿನಿಂದ ಹೊರಟ ಸಂಗೀತ ಎಂದು ಯಾರೂ ಹೇಳುವಂತಿಲ್ಲ.
https://twitter.com/mezerg_/status/1301226530983550985?ref_src=twsrc%5Etfw%7Ctwcamp%5Etweetembed%7Ctwterm%5E1301226530983550985%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fits-a-melondy-man-playing-music-with-melons-and-kiwis-will-amaze-you-watch%2F647183