![](https://kannadadunia.com/wp-content/uploads/2020/06/886190-869061-farmer-reuters-1024x576.jpg)
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆಗಸ್ಟ್ 9 ರಂದು 17 ಸಾವಿರ ಕೋಟಿ ರೂಪಾಯಿಯನ್ನು 8.5 ಕೋಟಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಅದರ ನಂತರ ಮುಂದಿನ 20 ದಿನಗಳಲ್ಲಿ ಕೇಂದ್ರ ಕೃಷಿ ಸಚಿವಾಲಯವು 30 ಲಕ್ಷ ರೈತರ ಖಾತೆಗೆ ತಲಾ 2 ಸಾವಿರ ರೂಪಾಯಿ ವರ್ಗಾಯಿಸಿದೆ.
ಈ ತಿಂಗಳಲ್ಲಿ 8 ಕೋಟಿ 81 ಲಕ್ಷ ಫಲಾನುಭವಿಗಳು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯಲು ಮುಂದೆ ಬಂದಿದ್ದಾರೆ. ಇನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವೆಂದ್ರೆ ದಾಖಲೆಗಳನ್ನು ಪರಿಶೀಲಿಸಿ. ಆತಂಕಪಡುವ ಅಗತ್ಯವಿಲ್ಲ. ಈ ವರ್ಷ ನವೆಂಬರ್ ವೇಳೆಗೆ ಸುಮಾರು ಎರಡು ಕೋಟಿಗೂ ಹೆಚ್ಚು ರೈತರ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ, ಸೆಪ್ಟೆಂಬರ್ 30 ರವರೆಗೆ ದೇಶದ ಸುಮಾರು 10 ಕೋಟಿ 50 ಲಕ್ಷ ರೈತರು ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೋದಿ ಸರ್ಕಾರ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಅನೇಕ ಕೃಷಿ ತಜ್ಞರು ಇದನ್ನು ಸ್ವಾಗತಿಸಿದ್ದಾರೆ. ಆದ್ರೆ ಮತ್ತೆ ಕೆಲ ತಜ್ಞರು ಇದನ್ನು ವಾರ್ಷಿಕ 6 ಸಾವಿರದ ಬದಲು 15 ಸಾವಿರಕ್ಕೆ ಏರಿಸುವಂತೆ ಸಲಹೆ ನೀಡಿದ್ದಾರೆ.