ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ, ಪದವಿ ಮತ್ತು ಸ್ನಾತಕೋತ್ತರ ಮಹಿಳೆಯರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ವೈಟ್ ಹ್ಯಾಟ್ ಜೂನಿಯರ್ ತನ್ನ ಕಂಪನಿಯಲ್ಲಿ ಭಾರತದ ಮಹಿಳಾ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ.
ಕಂಪನಿ ಇಲ್ಲಿಯವರೆಗೆ 7,000 ಕ್ಕೂ ಹೆಚ್ಚು ಶಿಕ್ಷಕರನ್ನು ಹೊಂದಿದೆ. ವರ್ಷದ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು 20,000ಕ್ಕೇರಿಸಲು ಕಂಪನಿ ಮುಂದಾಗಿದೆ. ಅಂದರೆ ಈ ವರ್ಷ ಇನ್ನೂ 13,000 ಶಿಕ್ಷಕರನ್ನು ನೇಮಕ ಮಾಡಲು ಕಂಪನಿ ಪ್ಲಾನ್ ಮಾಡಿದೆ.
ವೈಟ್‌ಹ್ಯಾಟ್ ಜೂನಿಯರನ್ನು ಇತ್ತೀಚೆಗೆ ಬೈಜು ಸ್ವಾಧೀನಪಡಿಸಿಕೊಂಡಿದೆ. ಭಾರತ ಯುಎಸ್, ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ವೇದಿಕೆಗೆ ಹೆಚ್ಚಿನ ಶಿಕ್ಷಕರು ಬೇಕಾಗಿದ್ದಾರೆ. ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು, ಹೆಚ್ಚು ಶಿಕ್ಷಕರ ನೇಮಕಕ್ಕೆ ಕಂಪನಿ ಮುಂದಾಗಿದೆ. ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಬಂದಿರುವುದು ಇನ್ನೊಂದು ಕಾರಣವಾಗಿದೆ.
ಪ್ರಸ್ತುತ, ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡ್ತಿರುವ ಶೇಕಡಾ 84 ರಷ್ಟು ಶಿಕ್ಷಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರು ಮನೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ 50,000 ರಿಂದ 1.5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷಕರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಎಂದು ಕಂಪನಿ ಹೇಳಿದೆ.