ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಿಕೆ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಪಬ್, ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರೆಯಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಪಬ್ಗಳನ್ನು ತೆರೆಯೋದಿಕ್ಕೆ ಅವಕಾಶ ನೀಡಿರಲಿಲ್ಲ. ಹಾಗೆಯೇ ರೆಸ್ಟೋರೆಂಟ್ಗಳನ್ನು ಅಲ್ಲಿಯೇ ಕುಳಿತು ಮದ್ಯಪಾನ ಮಾಡಲು ಅವಕಾಶ ಇರಲಿಲ್ಲ. ಆದರೆ ಕಳೆದೆರಡು ದಿನಗಳಿಂದ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಹಾರದ ಜೊತೆಗೆ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ.
ಪಬ್, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ನಲ್ಲಿ ಶೇ. 50 ರಷ್ಟು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಪಾರ್ಸೆಲ್ಗೆ ಮಾತ್ರ ಅನುಮತಿ ನೀಡಲಾಗಿತ್ತು. ಈಗ ಆ ಆದೇಶ ವಾಪಸ್ಸು ಪಡೆದು ಅಲ್ಲೇ ಮದ್ಯ ಕುಡಿಯಲು ಹಾಗೂ ಟೇಬಲ್ ಮದ್ಯಕ್ಕೆ ಅವಕಾಶ ನೀಡಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ.
ಇಷ್ಟೆಲ್ಲಾ ಇದ್ದರೂ ಗ್ರಾಹಕರು ಮಾತ್ರ ಸ್ಟೋರೆಂಟ್ಗಳತ್ತ ಸುಳಿಯುತ್ತಿಲ್ಲ. ಕೇವಲ ಪಾರ್ಸಲ್ಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಆದರೆ ಅಲ್ಲಿಯೇ ಕೂತು ತಿನ್ನುವಂತಹ ಅಥವಾ ಮದ್ಯ ಸೇವನೆ ಮಾಡಲು ಗ್ರಾಹಕರೇ ಇಲ್ಲ ಎನ್ನಲಾಗಿದೆ. ಸಂಜೆವರೆಗೆ ಕಾದರೂ ಬೆರಳೆಣಿಕೆಷ್ಟು ಗ್ರಾಹಕರೂ ಹೋಟೆಲ್ ರೆಸ್ಟೋರೆಂಟ್ಗಳತ್ತ ಸುಳಿಯುತ್ತಿಲ್ಲ. ಇದು ಹೀಗೆ ಮುಂದುವರೆದರೆ ರೆಸ್ಟೋರೆಂಟ್, ಪಬ್, ಬಾರ್ಗಳನ್ನು ನಡೆಸುವುದು ಕಷ್ಟ ಎನ್ನಲಾಗುತ್ತಿದೆ. ಇತ್ತ ಐಟಿ ಬಿಟಿಯವರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವುದೂ ಗ್ರಾಹಕರು ಇಳಿಕೆಯಾಗಲು ಪ್ರಮುಖ ಕಾರಣ ಎನ್ನಬಹುದು.