alex Certify ಮನೆ ಛಾವಣಿಯಿಂದ ಬಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಛಾವಣಿಯಿಂದ ಬಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ

ಎರಡು ದೈತ್ಯ ಹೆಬ್ಬಾವುಗಳು ಮನೆಯ ಛಾವಣಿಯಿಂದ ಧೊಪ್ಪೆಂದು ಮನೆಯೊಳಗೆ ಬಿದ್ದರೆ ಹೇಗಾಗಬೇಡ ? ಅದು ಬಿದ್ದ ಶಬ್ದಕ್ಕೇ ಹೆದರಿಕೆಯಾಗಿರುತ್ತದೆ. ಇನ್ನು ಶಬ್ದ ಕೇಳಿದ ದಿಕ್ಕಿನತ್ತ ಹೋಗಿ ಅದನ್ನು ನೋಡಿದ ಮೇಲಂತೂ ದಿಗಿಲು ಹುಟ್ಟದೇ ಇರುತ್ತದೆಯೇ?

ಜಗತ್ತಿನ ಶೇ.10 ರಷ್ಟು ಜೀವವೈವಿಧ್ಯ ಒಳಗೊಂಡಿರುವ ಆಸ್ಟ್ರೇಲಿಯಾ, ಅಲ್ಲಿನ ಪರಿಸರ ವ್ಯವಸ್ಥೆ, ಮಳೆಕಾಡು, ಮರುಭೂಮಿ, ಬೆಟ್ಟ-ಗುಡ್ಡ ಇತ್ಯಾದಿಗಳಿಂದಾಗಿ ವನ್ಯಜೀವಿಗಳ ಉಪಟಳವೂ ಇದೆ.

ಅದರಲ್ಲೂ ಸರ್ಪ ಸಂತತಿಗೇನೂ ಕೊರತೆಯಿಲ್ಲ. ಮನೆಯಿಂದ ಹಿಡಿದು ವಾಣಿಜ್ಯ ಕಟ್ಟಡಗಳವರೆಗೆ ಎಲ್ಲೆಲ್ಲೂ ಆಗಾಗ ಹರಿದಾಡಿ ಹೆದರಿಸುತ್ತಲೇ ಇರುತ್ತವೆ.

ಇಲ್ಲಿನ ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ಬ್ರೈಸ್ ಬೇನ್ ಪ್ರದೇಶದಲ್ಲಿ ಡೇವಿಡ್ ಟೈಟ್ ಎಂಬುವರ ಮನೆಯಲ್ಲಿ ಎರಡು ದೈತ್ಯ ಹಾವುಗಳು ಪತ್ತೆಯಾಗಿವೆ. ಆಸ್ಟ್ರೇಲಿಯಾದಲ್ಲಿ ಇದು ಸಾಧಾರಣವಾಗಿ ಸರೀಸೃಪಗಳು ಸಂತಾನೋತ್ಪತ್ತಿ ಮಾಡುವ ಕಾಲ. ಗಂಡು-ಹೆಣ್ಣು ಹೆಬ್ಬಾವುಗಳೆರಡು ಇದಕ್ಕಾಗಿ ಕಿತ್ತಾಡಿಕೊಂಡು ಡೇವಿಡ್ ಅವರ ಮನೆಯ ಛಾವಣಿ ಏರಿ ಕುಳಿತಿವೆ.

ಛಾವಣಿಯಲ್ಲಿನ ಸದ್ದು ಕೇಳಿದ ಮನೆಯವರೆಲ್ಲರೂ ಹಾವಿರಬಹುದು ಎಂದುಕೊಳ್ಳುವಷ್ಟರಲ್ಲಿ ಎರಡೂ ಹಾವುಗಳು ಮೇಲಿಂದ ಕೆಳಕ್ಕೆ ಬಿದ್ದಿವೆ. ತಕ್ಷಣ ಸ್ಟೀವನ್ ಬ್ರೌನ್ ಎಂಬುವರಿಗೆ ದೂರವಾಣಿ ಕರೆ ಮಾಡಿ, ಹಾವು ಹಿಡಿದು 1 ಕಿ.ಮೀ. ದೂರದ ಕಾಡಿಗೆ ಬಿಟ್ಟಿದ್ದಾರೆ.

ಸ್ಟೀವನ್ ಬ್ರೌನ್ ಪ್ರಕಾರ ಒಂದು ಹಾವು 2.9 ಮೀಟರ್ ಹಾಗೂ ಮತ್ತೊಂದು ಹಾವು 2.5 ಮೀಟರ್ ಉದ್ದವಿತ್ತು.‌ ಸಂತಾನೋತ್ಪತ್ತಿ ಕಾಲವಾದ್ದರಿಂದ ಹೀಗೆ ಕಾಣಿಸಿಕೊಳ್ಳುವುದು ಸಹಜ ಎಂದಿದ್ದಾರೆ.

https://www.facebook.com/brisbanenorthsnakecatchersandrelocation/posts/1252017935139414

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...