ಒಣ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಪೌಷ್ಠಿಕಾಂಶವಿರುತ್ತದೆ. ಆದ್ರೆ ಹಲ್ಲು ಬರದ ಮಕ್ಕಳಿಗೆ ಒಣ ಹಣ್ಣುಗಳನ್ನು ನೀಡುವುದು ಕಷ್ಟ. ಹಾಗಾಗಿ ಅದನ್ನು ಪುಡಿ ಮಾಡಿ ನೀಡಬೇಕಾಗುತ್ತದೆ.
ಒಣ ಹಣ್ಣುಗಳ ಪುಡಿಯನ್ನು ಮಕ್ಕಳಿಗೆ ನೀಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಒಣ ಹಣ್ಣಿನ ಪುಡಿ ತಯಾರಿಸಲು 100 ಗ್ರಾಂ ಬಾದಾಮಿ, 100 ಗ್ರಾಂ ಗೋಡಂಬಿ, 100 ಗ್ರಾಂ ಪಿಸ್ತಾ, ಒಂದು ಜಾಯಿಕಾಯಿ, 100 ಗ್ರಾಂ ಹುರಿದ ಕಡಲೆ, 1 ಟೀಸ್ಪೂನ್ ಒಣ ಶುಂಠಿ ಪುಡಿ, ಐದು ಏಲಕ್ಕಿ, ಅರ್ಧ ಟೀಸ್ಪೂನ್ ಅರಿಶಿನ ಪುಡಿಯನ್ನು ಸಿದ್ಧಪಡಿಸಿಕೊಳ್ಳಿ.
ಒಂದು ಬಾಣೆಲೆಗೆ ಇವೆಲ್ಲವನ್ನು ಒಂದೊಂದಾಗಿ ಹಾಕಿ ಹುರಿಯಿರಿ. ಚೆನ್ನಾಗಿ ಫ್ರೈ ಮಾಡಿದ ನಂತ್ರ ತಣ್ಣಗಾಗಲು ಬಿಡಿ. ನಂತ್ರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತ್ರ ಪುಡಿಯನ್ನು ಏರ್ ಟೈಟ್ ಜಾರಿಗೆ ಹಾಕಿಡಿ. ಫ್ರಿಜ್ ನಲ್ಲಿಟ್ಟ ಈ ಪುಡಿಯನ್ನು ಹಾಲಿಗೆ ಹಾಕಿ ಕುಡಿಸಬಹುದು. ಒಂದು ತಿಂಗಳು ಇದನ್ನು ಬಳಸಬಹುದು.