ಕ್ಯಾನ್ ಬೆರಾ: ಗರ್ಲ್ ಫ್ರೆಂಡ್ ಸೇರಲು ಹೋಟೆಲ್ ಕ್ವಾರಂಟೈನ್ ಸೆಂಟರ್ ನ ಕಿಟಕಿಯಿಂದ ಪರಾರಿಯಾದ ವ್ಯಕ್ತಿ ಜೈಲು ಸೇರಿದ್ದ…! ಪರ್ತ್ ನಿವಾಸಿ ಯೂಸೂಫ್ ಕಾರ್ಕಯಾ ಕ್ವಾರಂಟೈನ್ ನಿಯಮ ಮುರಿದು ಜುಲೈನಲ್ಲಿ ಜೈಲು ಪಾಲಾಗಿದ್ದ.
ಅನಾರೋಗ್ಯಕ್ಕೊಳಗಾಗಿದ್ದ ತನ್ನ ಚಿಕ್ಕಪ್ಪನನ್ನು ನೋಡಲು ಆತ ಸಿಡ್ನಿಗೆ ತೆರಳಿದ್ದ. ವಾಪಸಾದ ನಂತರ ಪರ್ತ್ ನ ಮರ್ಕ್ಯುರ್ ಹೋಟೆಲ್ ನಲ್ಲಿ ಆತನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆದರೆ, ಆತ ಮೂರು ದಿನದಲ್ಲಿ ಹಲವು ಬಾರಿ ಹೋಟೆಲ್ ಕಿಟಕಿಯ ಕೋಣೆಯಿಂದ ಏಣಿ ಮೂಲಕ ಇಳಿದು ತನ್ನ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದ. ಹೋಟೆಲ್ ಸಿಬ್ಬಂದಿ ಸಿಸಿ ಟಿವಿಯಲ್ಲಿ ಆತನ ಘನಂದಾರಿ ಕಾರ್ಯ ನೋಡಿ ಏಣಿ ತೆಗೆದಿದ್ದರು. ಆದರೂ ಆತ ಹಾಗೂ ಸ್ನೇಹಿತೆ ಸೇರಿ ಮತ್ತೊಂದು ಏಣಿ ವ್ಯವಸ್ಥೆ ಮಾಡಿಕೊಂಡಿದ್ದರು.
ಒಂದು ದಿನ ಕಾರ್ಕಯಾ ತನ್ನ ಸ್ನೇಹಿತೆಯ ಬೆಡ್ ರೂಂನಲ್ಲೇ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ನಂತರ ಆತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಶಿಕ್ಷೆಯ ಅವಧಿಯನ್ನು ಒಂದು ತಿಂಗಳಿಗೆ ಕಡಿಮೆ ಮಾಡಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.