ನವದೆಹಲಿ: ಸಾಲಗಾರರಿಗೆ ಆರ್ಥಿಕ ತೊಂದರೆ ಆಗಿದ್ದರೆ ಎರಡು ವರ್ಷದವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ.
ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಸಾಲದ ಇಎಂಐ ಕಂತು ಮುಂದೂಡಿಕೆ ಯೋಜನೆಯನ್ನು ಎರಡು ವರ್ಷಗಳ ಕಾಲ ಮುಂದೂಡಲು ಅವಕಾಶ ಇದೆ. ಕೊರೊನಾ ಕಾರಣದಿಂದಾಗಿ ಸಾಲದ ಕಂತು ಪಾವತಿಸಲು ಆರು ತಿಂಗಳು ವಿನಾಯಿತಿ ನೀಡಲಾಗಿತ್ತು. ಆಗಸ್ಟ್ 31 ಕ್ಕೆ ಅವಧಿ ಮುಕ್ತಾಯವಾಗಿದ್ದು, ಸೆಪ್ಟಂಬರ್ ನಲ್ಲಿ ಗ್ರಾಹಕರು ಇಎಂಐ ಪಾವತಿಸಬೇಕಿದೆ.
ಈ ನಡುವೆ ವಿನಾಯಿತಿ ನೀಡಲಾಗಿದ್ದ ಅವಧಿಯ ಇಎಂಐಗೆ ಬಡ್ಡಿ ಮೇಲೆ ಬಡ್ಡಿಯನ್ನು ಸರ್ಕಾರ ವಿಧಿಸುತ್ತಿದೆ ಎಂಬ ಆರೋಪ ಹಾಗೂ ಬಡ್ಡಿ ವಿನಾಯಿತಿ ನೀಡಬೇಕು. ಸಾಲದ ಕಂತು ಮುಂದೂಡಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ಇಎಂಐ ಪಾವತಿ ಬಗ್ಗೆ ಮಾಹಿತಿ ನೀಡಿದ್ದು ಮುಂದೂಡಿಕೆ ಮಾಡಿದ ಇಎಂಐ ಮೇಲೆ ಬಡ್ಡಿ ವಿಧಿಸದಿದ್ದರೆ ಹಣಕಾಸಿನ ಮೂಲ ತತ್ವಕ್ಕೆ ವಿರುದ್ಧವಾಗುತ್ತದೆ ಎಂದು ಹೇಳಿದೆ. ನಿಗದಿಯಂತೆ ಸಾಲ ಮರುಪಾವತಿ ಮಾಡಿದವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಲಾಗಿದೆ.
ವೈಯಕ್ತಿಕ, ವಾಹನ, ಗೃಹ, ಕಾರ್ಪೊರೇಟ್ ಸಾಲಗಳ ಪುನರ್ ರಚನೆಗೆ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ಸಾಲದ ಕಂತುಗಳನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಆದರೆ ಹೆಚ್ಚಿನ ಬಡ್ಡಿಯನ್ನು ಭರಿಸಬೇಕಿದೆ ಎಂದು ಹೇಳಲಾಗಿದೆ.