ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 2ರ ಇಂದಿನಿಂದ ಆನ್ಲೈನ್ ಮೂಲಕ ದಾಖಲೆಗಳ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕೆಇಎ ನೀಡಿರುವ ಲಿಂಕ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಸೆಪ್ಟಂಬರ್ 2 ರಿಂದ 3ರವರೆಗೆ ಒಂದರಿಂದ 2 ಸಾವಿರ ರ್ಯಾಂಕ್ ಒಳಗಿನ ಅಭ್ಯರ್ಥಿಗಳು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಿದೆ.
ಇದೇ ರೀತಿ ರ್ಯಾಂಕ್ ಆಧಾರದ ಮೇಲೆ ಸೆಪ್ಟಂಬರ್ 27ರವರೆಗೆ ಅವಕಾಶ ನೀಡಲಾಗಿದೆ. ಸಿಇಟಿಗೆ ಸಲ್ಲಿಸಿದ್ದ ಅರ್ಜಿ ಪ್ರತಿಗಳು, ಸಿಇಟಿ ಮೂಲ ಪ್ರವೇಶಪತ್ರ, ಎಸ್ಎಸ್ಎಲ್ಸಿ, ಪಿಯುಸಿ ವ್ಯಾಸಂಗ ಅಂಕಪಟ್ಟಿ, 7 ವರ್ಷದ ವ್ಯಾಸಾಂಗ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಅರ್ಹತೆಗೆ ಅನುಗುಣವಾಗಿ ಪಿಡಿಎಫ್ ರೂಪದಲ್ಲಿ ವೆಬ್ಸೈಟ್ನಲ್ಲಿ https://cetonline.karnataka.gov.in/kea/ ನೀಡುವ ಲಿಂಕ್ ಕ್ಲಿಕ್ ಮಾಡಿ ಅಪ್ಲೋಡ್ ಮಾಡಬೇಕೆಂದು ಹೇಳಲಾಗಿದೆ.