ಮಹಾರಾಷ್ಟ್ರ ರಾಜಧಾನಿ ಮುಂಬೈನ ಅಂಧೇರಿಯಲ್ಲಿ ಹೆಂಡತಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ವಿಚ್ಛೇದನ ನೀಡಿದ ಪತಿ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
2018ರಲ್ಲಿ ಆರೋಪಿ ಮದುವೆಯಾಗಿದ್ದನಂತೆ. ಇದಕ್ಕೂ ಮೊದಲೇ ಎರಡು ಮದುವೆಯಾಗಿ ಆರೋಪಿ ವಿಚ್ಛೇದನ ನೀಡಿದ್ದನಂತೆ. ಮದುವೆ ನಂತ್ರ ಪತ್ನಿಗೆ ಸಾಕಷ್ಟು ಹಿಂಸೆ ನೀಡಿದ್ದ ಎನ್ನಲಾಗಿದೆ. ಪ್ರತಿ ದಿನ ಪೋರ್ನ್ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಆರೋಪಿ ಅದ್ರಂತೆ ನಟಿಸಲು ಪತ್ನಿಗೆ ಹೇಳ್ತಿದ್ದನಂತೆ.
ಪತ್ನಿಗೆ ಹಣ್ಣಿನ ರಸ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದನಂತೆ. ನಂತ್ರ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದನಂತೆ. ರಕ್ತಸ್ರಾವವಾಗಿ ಮಹಿಳೆ ಆಸ್ಪತ್ರೆ ಸೇರಿದ್ದಳಂತೆ. ಈಗ ಧೈರ್ಯ ಮಾಡಿ ಮಹಿಳೆ ಪೊಲೀಸ್ ಬಳಿ ಹೋಗಿದ್ದಾಳೆ. ಪತಿ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಸೇರಿದಂತೆ ಅನೇಕ ಪ್ರಕರಣ ದಾಖಲಾಗಿದೆ.