alex Certify ಯಾವುದೇ ಔಷಧಿ ಇಲ್ಲದೆ ಗುಣಮುಖನಾದ HIV ರೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ಔಷಧಿ ಇಲ್ಲದೆ ಗುಣಮುಖನಾದ HIV ರೋಗಿ

ಎಚ್ ಐ ವಿ ರೋಗಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿ ಯಾವುದೇ ಚಿಕಿತ್ಸೆಯಿಲ್ಲದೆ ಎಚ್‌ಐವಿಯಿಂದ ವ್ಯಕ್ತಿಯೊಬ್ಬ ಗುಣಮುಖನಾಗಿದ್ದಾನೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಆತನ ಗುಣಮುಖನಾಗಲು ಕಾರಣವಾಗಿದೆ.

ವಿಜ್ಞಾನಿಗಳು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನು ಎಚ್‌ಐವಿ ಚಿಕಿತ್ಸೆಯ ಪ್ರಮುಖ ಕೊಂಡಿಯಾಗಿ ಪರಿಗಣಿಸುತ್ತಿದ್ದಾರೆ. ಈ ರೋಗಿಯ ದೇಹದಲ್ಲಿ ಎಚ್‌ಐವಿ ಸಕ್ರಿಯ ವೈರಸ್ ಇಲ್ಲ. ಇದರರ್ಥ ಎಚ್‌ಐವಿ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ಈಗ ಸ್ವಯಂ ಗುಣಮುಖನಾಗಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ನಂತ್ರ  ವೈದ್ಯರು ಆತನ ದೇಹದಲ್ಲಿರುವ  150 ಕೋಟಿ ಕೋಶಗಳನ್ನು ಪರೀಕ್ಷಿಸಿದರು. ಈ ರೋಗಿಗೆ ಇಸಿ 2 ಎಂದು ಹೆಸರಿಡಲಾಗಿದೆ.

ಈವರೆಗೆ ವಿಶ್ವದಲ್ಲಿ ಬೊನ್ ಮ್ಯಾರೋ ಚಿಕಿತ್ಸೆಯಿಂದ ಇಬ್ಬರು ಗುಣಮುಖರಾಗಿದ್ದಾರೆ. ಅವ್ರಿಗೆ ವಾಪಸ್ ಎಚ್ ಐ ವಿ ಕಾಣಿಸಿಕೊಂಡಿಲ್ಲ. ಆದ್ರೆ ಯಾವುದೇ ಚಿಕಿತ್ಸೆಯಿಲ್ಲದೆ ದೇಹದ ರೋಗ ನಿರೋಧಕ ಶಕ್ತಿಯಿಂದ ಎಚ್ ಐ ವಿ ಗುಣಮುಖವಾಗಿದ್ದು ಇದೇ ಮೊದಲು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...