ಹೊರಗಡೆ ಜಿಟಿಜಿಟಿ ಮಳೆ ಬರುವಾಗ ಏನಾದರೂ ಬಿಸಿ ಬಿಸಿಯಾದ ತಿನಿಸು, ಪಾನೀಯಗಳನ್ನು ಕುಡಿದರೆ ದೇಹ ಬೆಚ್ಚಗೆ ಇರುತ್ತದೆ. ಮಳೆ ಬರುವಾಗ ಬಿಸಿ ಬಿಸಿಯಾದ ಸೂಪ್ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ ಇಲ್ಲಿ ಮಶ್ರೂಮ್ ಸೂಪ್ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಟೇಬಲ್ ಸ್ಪೂನ್ – ಆಲಿವ್ ಎಣ್ಣೆ, 1 ಟೇಬಲ್ ಸ್ಪೂನ್ – ಬೆಣ್ಣೆ, 1 – ಪಲಾವ್ ಎಲೆ, 1 – ಬೆಳ್ಳುಳ್ಳಿ ಎಸಳು, ½ ಕಪ್ – ಸಾಂಬಾರ ಈರುಳ್ಳಿ, 200 ಗ್ರಾಂ – ಮಶ್ರೂಮ್, ಚಿಟಿಕೆ – ಜಾಯಿಕಾಯಿ ಪುಡಿ, ಕಾಳುಮೆಣಸಿನ ಪುಡಿ – ರುಚಿಗೆ ತಕ್ಕಷ್ಟು, ಉಪ್ಪು – ರುಚಿಗೆ ತಕ್ಕಷ್ಟು, 1 ಟೇಬಲ್ ಸ್ಪೂನ್ – ಮೈದಾ ಹಿಟ್ಟು, ½ ಕಪ್ – ವೆಜಿಟೇಬಲ್ ಸ್ಟಾಕ್, 2-ಕಪ್ – ಹಾಲು, 4 ಟೇಬಲ್ ಸ್ಪೂನ್ – ಕ್ರೀಮ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ, ಬೆಣ್ಣೆ ಹಾಗೂ ಪಲಾವ್ ಎಲೆ ಹಾಕಿ. ನಂತರ ಇದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಮೆತ್ತಗಾಗುವವರಗೆ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಕತ್ತರಿಸಿಕೊಂಡ ಮಶ್ರೂಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಶ್ರೂಮ್ ನೀರು ಬಿಟ್ಟುಕೊಳ್ಳುತ್ತಿದ್ದಂತೆ ಗ್ಯಾಸ್ ನ ಉರಿ ಸಣ್ಣಗೆ ಇಟ್ಟುಕೊಂಡು ಅದಕ್ಕೆ ಜಾಯಿಕಾಯಿ ಪುಡಿ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ಮೈದಾ ಹಿಟ್ಟು ಸೇರಿಸಿ 4 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಇದಕ್ಕೆ ಹಾಲು, ವೆಜಿಟೇಬಲ್ ಸ್ಟಾಕ್, ಹಾಕಿ ಈ ಮಿಶ್ರಣ ದಪ್ಪಗಾಗುವರೆಗೆ ಕುದಿಸಿಕೊಂಡು ಇದಕ್ಕೆ ಕ್ರೀಮ್ ಸೇರಿಸಿ 1 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ಬಿಸಿ ಇರುವಾಗಲೇ ಸರ್ವ್ ಮಾಡಿ.