ಕಾರ್ನ್ ಚಾಟ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಸಂಜೆ ವೇಳೆ ತಿನ್ನುವುದಕ್ಕೆ ಇದೊಂದು ಒಳ್ಳೆಯ ಸ್ನ್ಯಾಕ್ಸ್ ಎನ್ನಬಹುದು, ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್ – 2 ಕಪ್, ಈರುಳ್ಳಿ – 1, ಬೆಣ್ಣೆ – 2 ಟೀ ಸ್ಪೂನ್, ಚಾಟ್ ಮಸಾಲ – 1/4 ಕಪ್, ಖಾರದ ಪುಡಿ – 1/4 ಟೀ ಸ್ಪೂನ್, ಕಾಳುಮೆಣಸಿನ ಪುಡಿ – ಚಿಟಿಕೆ, ಲಿಂಬೆ ಹಣ್ಣಿನ ರಸ -1 ಟೀ ಸ್ಪೂನ್, ಖಾರ ಬೂಂದಿ – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿಸೊಪ್ಪು – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಅದು ಕುದಿಯಲು ಆರಂಭಿಸಿದಾಗ ಕಾರ್ನ್ ಹಾಕಿ. ಇದು ಬೆಂದ ಬಳಿಕ ಸೋಸಿಕೊಳ್ಳಿ. ಒಂದು ಅಗಲವಾದ ಬೌಲ್ ಗೆ ಕಾರ್ನ್, ಸಣ್ಣಗೆ ಕತ್ತಸಿದ ಈರುಳ್ಳಿ, ಚಾಟ್ ಮಸಾಲ, ಬೆಣ್ಣೆ, ಖಾರದ ಪುಡಿ, ಕಾಳುಮೆಣಸಿನ ಪುಡಿ, ಲಿಂಬೆಹಣ್ಣಿನ ರಸ, ಖಾರ ಬೂಂದಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕಾರ್ನ್ ಚಾಟ್ ಸವಿಯಲು ಸಿದ್ಧ.