ಸಾರ್ವಜನಿಕ ಭವಿಷ್ಯ ನಿಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮೇಲೆ ಸಾಕಷ್ಟು ಹಣವನ್ನು ಗಳಿಸಬಹುದು. ಪಿಪಿಎಫ್ 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಹೂಡಿಕೆದಾರರಿಗೆ ಭಾಗಶಃ ಹಣವನ್ನು ಮಧ್ಯದಲ್ಲಿ ಹಿಂಪಡೆಯುವ ಅವಕಾಶವಿದೆ. ಹೂಡಿಕೆದಾರರು ಕೆಲವು ಸಂದರ್ಭಗಳಲ್ಲಿ ಅಕಾಲಿಕವಾಗಿ ಖಾತೆ ಬಂದ್ ಮಾಡುವಂತೆ ಕೋರಬಹುದು.
ಪಿಪಿಎಫ್ ಯೋಜನೆಗಳ ಮೇಲಿನ ಬಡ್ಡಿಯನ್ನು ಸರ್ಕಾರ ಪ್ರತಿ ತ್ರೈಮಾಸಿಕದಲ್ಲಿ ಪಾವತಿಸುತ್ತದೆ. ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಏಪ್ರಿಲ್ 1 ರಿಂದ ಜೂನ್ 31 ರವರೆಗೆ ಶೇಕಡಾ 7.1 ಎಂದು ಸರ್ಕಾರ ನಿಗದಿಪಡಿಸಿದೆ.
ಸಾಮಾನ್ಯವಾಗಿ, ಖಾತೆ ತೆರೆಯುವ ದಿನಾಂಕದಿಂದ 15 ವರ್ಷಗಳ ಮುಕ್ತಾಯ ಅವಧಿಯ ನಂತರ ಹಣ ಹಿಂಪಡೆಯಬೇಕು. ಆದ್ರೆ ಖಾತೆ ತೆರೆಯುವ ದಿನಾಂಕದಿಂದ 6 ನೇ ವರ್ಷದ ಕೊನೆಯಲ್ಲಿ ಭಾಗಶಃ ಹಣ ಹಿಂಪಡೆಯಬಹುದು. ವೈದ್ಯಕೀಯ ತುರ್ತುಸ್ಥಿತಿ ಅಥವಾ ಶೈಕ್ಷಣಿಕ ಅಗತ್ಯಗಳಿಗಾಗಿ ಹೂಡಿಕೆದಾರರು ಪಿಪಿಎಫ್ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. ಇದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ.