ಕೊರೊನಾ ಲಸಿಕೆ ತುರ್ತು ಅನುಮೋದನೆ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಬೀತಾಗದ ಲಸಿಕೆಗಳನ್ನು ಬಳಸುವುದರಿಂದ ಜನರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಅಮೆರಿಕದ ಔಷಧ ನಿಯಂತ್ರಕ ಮತ್ತು ಆಹಾರ ಆಡಳಿತ ವಿಭಾಗ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ ನಂತರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಪ್ರಯೋಗ ಕುರಿತಾಗಿ ದೇಶಗಳಿಗೆ ಎಚ್ಚರಿಕೆ ನೀಡಿದೆ.
ದೃಢೀಕರಿಸದ ಕೊರೊನಾ ಲಸಿಕೆಯನ್ನು ಬಳಸುವುದರಿಂದ ಜನರಲ್ಲಿ ದುಷ್ಪರಿಣಾಮ ಉಂಟಾಗಬಹುದು. ಬಳಕೆಯ ಬಗ್ಗೆ ಅನುಮೋದನೆ ಅಧಿಕಾರವನ್ನು ನೀಡಲುವ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ವಿಶ್ವದಾದ್ಯಂತ ಅನೇಕ ವಿಜ್ಞಾನಿಗಳು, ಕಂಪನಿಗಳು, ಏಜೆನ್ಸಿಗಳು ಲಸಿಕೆ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಲಸಿಕೆ ಅನುಮೋದನೆ ಹಂತ-3 ಕ್ಲಿನಿಕಲ್ ಪ್ರಯೋಗಗಳ ದತ್ತಾಂಶವನ್ನು ಆಧರಿಸಿರಬೇಕು ಎಂದು ಅವರು ತಿಳಿಸಿದ್ದಾರೆ.