ನವದೆಹಲಿ: ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ದರ ಶೇಕಡ 23.9 ರಷ್ಟು ದಾಖಲೆಯ ಕುಸಿತ ಕಂಡಿದೆ.
ಕೊರೋನಾ ಸಾಂಕ್ರಮಿಕ ರೋಗದ ಪರಿಣಾಮದಿಂದಾಗಿ ಗ್ರಾಹಕರ ಬೇಡಿಕೆ ಮತ್ತು ಖಾಸಗಿ ಹೂಡಿಕೆಗಳ ಭಾರತದ ಆರ್ಥಿಕತೆ ಬೆಳವಣಿಗೆ ದರ 2020 – 21 ರಲ್ಲಿ ಮೊದಲ ತ್ರೈಮಾಸಿಕ ಜಿಡಿಪಿ ಸ್ಥಿರ ಬೆಲೆಯಲ್ಲಿ 26.9 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
2019 -20 ರ ಮೊದಲ ತ್ರೈಮಾಸಿಕದಲ್ಲಿ 35.35 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು ಶೇಕಡ 5.2 ಕ್ಕೆ ಹೋಲಿಸಿದರೆ ಶೇಕಡ 23.9 ರಷ್ಟು ಕುಸಿತದ ಬೆಳವಣಿಗೆ ತೋರಿಸಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ. ವಿಶೇಷ ಪ್ಯಾಕೇಜ್ ಘೋಷಣೆ, ಆರ್ಥಿಕ ಸುಧಾರಣೆ ಕ್ರಮ, ಬಡ್ಡಿದರಗಳ ಕಡಿತ ಮೊದಲಾದವುಗಳ ಕಾರಣ ಕೂಡ ಇದೆ ಎನ್ನಲಾಗಿದೆ.