ಕೊರಾನ ಕಾರಣದಿಂದ ಮಕ್ಕಳಿಗೆ ಸ್ಕೂಲ್ ಇಲ್ಲ. ಮನೆಯಲ್ಲಿಯೇ ಇದ್ದಾರೆ. ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿರುವುದರಿಂದ ಅವರನ್ನು ಒಂದೆಡೆ ಕೂರಿಸಿಕೊಂಡು ಹೇಳಿಕೊಡುವುದು ಪೋಷಕರಿಗೆ ಸವಾಲಿನ ಕೆಲಸವೆ ಸರಿ.
ಶಾಲೆಯಲ್ಲಿ ತಮ್ಮ ಗೆಳೆಯರೊಂದಿಗೆ ಆಡವಾಡುತ್ತಾ ಕಾಲ ಕಳೆಯುತ್ತಿದ್ದ ಮಕ್ಕಳಿಗೆ ಈಗ ಎಲ್ಲಿಗೂ ಹೊರಗೆ ಹೋಗುವುದಕ್ಕೆ ಕೂಡ ಆಗದೇ ಒಂದು ರೀತಿಯ ಒತ್ತಡ ಅನುಭವಿಸುತ್ತಿರುತ್ತಾರೆ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ ಗಳು ಅಸೈನ್ ಮೆಂಟ್ ಗಳು ಕೂಡ ಅವರಿಗೆ ಒಂದು ರೀತಿ ಕಿರಿಕಿರಿ ಉಂಟು ಮಾಡುತ್ತದೆ. ಜಾಸ್ತಿ ಹೊತ್ತು ಮೊಬೈಲ್ ಹಿಡಿದು ಕೂರುವುದರಿಂದ ಅವರ ಕಣ್ಣಿಗೂ ತೊಂದರೆಯಾಗುತ್ತದೆ.
ಇನ್ನು ಪೋಷಕರು ಕೂಡ ಮಕ್ಕಳ ತುಂಟಾಟ ಸಹಿಸಿಕೊಳ್ಳುವುದಕ್ಕೆ ಆಗದೇ ಒಂದೇಟು ಹೊಡೆಯುವುದು, ಬೈಯುವುದು ಮಾಡುತ್ತಾರೆ. ಇದರಿಂದ ಕೂಡ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಆದಷ್ಟು ಶಾಂತ ರೀತಿಯಲ್ಲಿ ಮಕ್ಕಳನ್ನು ನಿಭಾಯಿಸುವುದನ್ನು ಕಲಿಯಿರಿ. ಅವರು ಹೇಳಿದ್ದಕ್ಕೆಲ್ಲಾ ಸರಿ ಎಂದು ತಲೆ ಅಲ್ಲಾಡಿಸುವ ಬದಲು ಆ ವಸ್ತುವಿನ ಅಗತ್ಯದ ಕುರಿತು ಅವರೊಂದಿಗೆ ಚರ್ಚಿಸಿ ಆಮೇಲೆ ಅದನ್ನು ಅವರಿಗೆ ತೆಗೆಸಿಕೊಡಿ.
ಇನ್ನು ಪಾಠ ಓದಿಸುವಾಗ ಒಂದೇ ಬಾರಿ ಅದನ್ನು ಮುಗಿಸಲಿ ಎಂಬ ಒತ್ತಡ ಹೇರಬೇಡಿ. ಶಾಲೆಯಲ್ಲಿ ಟೀಚರ್ ಕಲಿಸುವುದಕ್ಕೂ, ಮನೆಯಲ್ಲಿ ಹೇಳಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಒಂದು ನಿರ್ಧಿಷ್ಟ ಸಮಯದಲ್ಲಿ ಅವರಿಗೆ ಹೇಳಿಕೊಡಿ. ಆಗ ಅವರ ಮನಸ್ಸು ಕೂಡ ಅದಕ್ಕೆ ಹೊಂದಿಕೊಳ್ಳುತ್ತದೆ.