ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಜಿಯೋ ಫೈಬರ್ ಸುಂಕದ ಯೋಜನೆಗೆ ಹೊಸ ರೂಪ ನೀಡಿದೆ. ಇಂಟರ್ನೆಟ್ ಸಂಪರ್ಕ ಹೆಚ್ಚು ಅಗತ್ಯವಿರುವ ಸಮಯದಲ್ಲಿ ಹೊಸ ಸುಂಕದ ಯೋಜನೆಗಳನ್ನು ಪರಿಚಯಿಸಿದೆ.
ಇನ್ಮುಂದೆ ಜಿಯೋಫೈಬರ್ ಯೋಜನೆಯ ಆರಂಭಿಕ ಬೆಲೆ 399 ರೂಪಾಯಿ. ಜಿಯೋಫೈಬರ್ಗೆ 30 ದಿನಗಳ ಉಚಿತ ಟ್ರಾಯಲ್ ಕೂಡ ನೀಡಲಾಗುವುದು. ಕಂಪನಿಯು ಇದಕ್ಕೆ NAYE INDIA KA NAYA JOSH ಎಂದು ಹೆಸರಿಟ್ಟಿದೆ.
ಕಂಪನಿಯ ಹೊಸ ಜಿಯೋ ಫೈಬರ್ ಯೋಜನೆಯಲ್ಲಿ ಅನೇಕ ಪ್ರಯೋಜನಗಳನ್ನು ನೀಡ್ತಿದೆ. ಜಿಯೋಫೈಬರ್ ಯೋಜನೆಗಳು ತಿಂಗಳಿಗೆ 399 ರೂಪಾಯಿಗಳಿಂದ 1,499 ರೂಪಾಯಿವರೆಗೆ ಲಭ್ಯವಿದೆ. ಉಚಿತ ಟ್ರಯಲ್ ನಲ್ಲಿ 150 ಎಂಬಿಪಿಎಸ್ ಅನ್ಲಿಮಿಟೆಡ್ ಸ್ಪೀಡ್ ಕೂಡ ನೀಡ್ತಿದೆ. ಇದಲ್ಲದೆ ಉಚಿತ ಧ್ವನಿ ಕರೆ ಲಭ್ಯವಿದೆ.